ಸೋನಿಯಾ ಸೈಕಲ್'ನಲ್ಲಿ ತಿರುಗಾಡುತ್ತಿರುವ ಭಾವಚಿತ್ರವನ್ನು ಬಾಲಿವುಡ್ ನಟ ರಿತೀಶ್ ದೇಶ್'ಮುಖ್ ಟ್ವಿಟ'ರ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಣಜಿ(ಡಿ.28): ಪುತ್ರ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದ ಸೋನಿಯಾ ಗಾಂಧಿ ಈಗ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ರಾಜಕೀಯ ಸನ್ಯಾಸತ್ವ ಪಡೆದ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗೋವಾದಲ್ಲಿ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ.
ಗೋವಾದ ಹೋಟೆಲ್'ನಲ್ಲಿ ಬೈಸಿಕಲ್'ನೊಂದಿಗೆ ಸುತ್ತಾಡಿಕೊಂಡು ರಜಾ ದಿನಗಳನ್ನು ಕಳೆಯುತ್ತಿರುವ ಸೋನಿಯಾ ಅವರ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಜಾ ದಿನಗಳನ್ನು ಕಳೆಯಲು ಕರಾವಳಿ ತೀರದ ರಾಜ್ಯಕ್ಕೆ ಡಿ.26ರಂದು ಬಂದಿರುವ ಸೋನಿಯಾ ಅವರು ದಕ್ಷಿಣ ಗೋವಾದ ಲೀಲಾ ಹೋಟೆಲ್'ನಲ್ಲಿ ಉಳಿದುಕೊಂಡಿದ್ದಾರೆ.
ಸೋನಿಯಾ ಸೈಕಲ್'ನಲ್ಲಿ ತಿರುಗಾಡುತ್ತಿರುವ ಭಾವಚಿತ್ರವನ್ನು ಬಾಲಿವುಡ್ ನಟ ರಿತೀಶ್ ದೇಶ್'ಮುಖ್ ಟ್ವಿಟ'ರ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ರಿತೀಶ್ ಅವರು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದಿ. ವಿಲಾಸ್'ರಾವ್ ದೇಶ್'ಮುಖ್ ಅವರ ಪುತ್ರ ಕೂಡ.
71 ವರ್ಷದ ಸೋನಿಯಾ 1998ರಿಂದ 2017ರವರೆಗೂ 19 ವರ್ಷಗಳ ಕಾಲ ಎಐಸಿಸಿ ಅಧ್ಯಕ್ಷರಾಗಿ ದೀರ್ಘಾವಧಿಯವರೆಗೂ ಕಾರ್ಯನಿರ್ವಹಿಸಿದ್ದರು. ರಾಹುಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳ ವಿದಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಎರಡೂ ರಾಜ್ಯಗಳಲ್ಲೂ ಕಾಂಗ್ರೆಸ್ ಸೋಲು ಅನುಭವಿಸಿದರೂ ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್'ನಲ್ಲಿ ಉತ್ತಮ ಸಾಧನೆ ತೋರಿದೆ.
