ಮುಂಬರುವ ಸಂಸತ್ತು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕೃತವಾಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮಹಿಳಾ ಕಾಂಗ್ರೆಸ್ ಈ ಅಭಿಯಾನವನ್ನು ಆರಂಭಿಸಿದೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ  ಮಹಿಳೆಯರಿಗೆ ಶೇ.33ರಷ್ಟು ಸೀಟುಗಳು ಮೀಸಲಾಗಿಡಬೇಕು ಎಂಬುವುದು ಸಹಿ ಸಂಗ್ರಹದ ಉದ್ದೇಶವಾಗಿದೆ.

ನವದೆಹಲಿ (ಮೇ.21): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿಯ ಪ್ರಯುಕ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಹಿಳಾ ಮೀಸಲಾತಿಗಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬರುವ ಸಂಸತ್ತು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕೃತವಾಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮಹಿಳಾ ಕಾಂಗ್ರೆಸ್ ಈ ಅಭಿಯಾನವನ್ನು ಆರಂಭಿಸಿದೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸೀಟುಗಳು ಮೀಸಲಾಗಿಡಬೇಕು ಎಂಬುವುದು ಸಹಿ ಸಂಗ್ರಹದ ಉದ್ದೇಶವಾಗಿದೆ.

ಈ ಅಭಿಯಾನಕ್ಕೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಅಳಿಯ ರಾಬರ್ಟ್ ವಾದ್ರಾ ಕೂಡಾ ಸಹಿ ಹಾಕಿದ್ದಾರೆ.

ರಾಜೀವ್ ಕಂಡ ಮಹಿಳಾ ಸಬಲೀಕರಣದ ಕನಸು ಮುಂಬರುವ ಮುಂಗಾರು ಅಧಿವೇಶನದಲ್ಲಿ ನನಸಾಗಬೇಕು. ಅದಕ್ಕಾಗಿ ಮನೆ-ಮನೆಗೆ ಹೋಗಿ ಸಹಿ ಸಂಗ್ರಹ ಮಾಡಲಾಗುವುದು, ಹಾಗೂ ಮನವಿಯೊಂದಿಗೆ ಅದನ್ನು ಆಗಸ್ಟ್ 20ರಂದು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದೆಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಓಝಾ ಹೇಳಿದ್ದಾರೆ.