ರಾಹುಲ್ ಗಾಂಧಿ- ಚೀನಾ ರಾಯಬಾರಿ ಭೇಟಿಯಿಂದಾಗಿ ಭಾರೀ ಮುಜುಗರಕ್ಕೆ ಒಳಗಾಗಿದ್ದ ಕಾಂಗ್ರೆಸ್ ಪಕ್ಷ ಸಂವಹನ ಕಾರ್ಯತಂತ್ರ ಪಡೆಯನ್ನು ರಚಿಸಿದೆ. 

ನವದೆಹಲಿ (ಜು.13): ರಾಹುಲ್ ಗಾಂಧಿ- ಚೀನಾ ರಾಯಬಾರಿ ಭೇಟಿಯಿಂದಾಗಿ ಭಾರೀ ಮುಜುಗರಕ್ಕೆ ಒಳಗಾಗಿದ್ದ ಕಾಂಗ್ರೆಸ್ ಪಕ್ಷಸಂವಹನ ಕಾರ್ಯತಂತ್ರ ಪಡೆಯನ್ನು ರಚಿಸಿದೆ. 

ಈ ತಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಿ.ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ, ಮಣಿಶಂಕರ್ ಅಯ್ಯರ್, ಆನಂದ್ ಶರ್ಮಾ, ಜೈರಾಮ್ ರಮೇಶ್, ಸುಷ್ಮಿತಾ ದೇವ್ ಮತ್ತು ಜ್ಯೋತಿರಾದಿತ್ಯ ಸಿಂಧ್ಯ ಇರಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇವರೆಲ್ಲಾ ಬಹಳ ಆಪ್ತರಾಗಿದ್ದಾರೆ. ಸೋನಿಯಾ ಗಾಂಧಿ ನೇತೃತ್ವದಲ್ಲಿ 10 ಜನರ ತಂಡ ಪ್ರತಿನಿತ್ಯ ಭೇಟಿಯಾಗಿ ಪ್ರಮುಖ ರಾಷ್ಟ್ರೀಯ ವಿಚಾರಗಳ ಬಗ್ಗೆ ಪಕ್ಷದ ನೀತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.