ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಮಧ್ಯರಾತ್ರಿ ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ದೆಹಲಿಗೆ ಕರೆದೊಯ್ಯಲಾಗಿದೆ.

ಶಿಮ್ಲಾ (ಮಾ.24): ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಮಧ್ಯರಾತ್ರಿ ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ದೆಹಲಿಗೆ ಕರೆದೊಯ್ಯಲಾಗಿದೆ.

ಶಿಮ್ಲಾ ಬಳಿಯ ಛಾರಬ್ರದಲ್ಲಿ ಮಗಳು ಪ್ರಿಯಾಂಕಾ ಗಾಂಧಿಗಾಗಿ ನಿರ್ಮಾಣಗೊಳ್ಳುತ್ತಿರುವ ಮನೆಯ ಕಾಮಗಾರಿ ವೀಕ್ಷಣೆಗಾಗಿ ಸೋನಿಯಾ ಆಗಮಿಸಿದ್ದರು. ಈ ವೇಳೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ‘ಸೋನಿಯಾಗಾಗಿ ಒಂದು ಆ್ಯಂಬುಲೆನ್ಸ್‌ ಬೇಕು ಎಂಬ ಕೋರಿಕೆ ಅವರ ಜತೆಯಲ್ಲಿದ್ದ ವೈದ್ಯರಿಂದ ಬಂತು. ಆದರೆ ಸೋನಿಯಾ ಅವರು ತಮ್ಮ ಕಾರಿನಲ್ಲೇ ದೆಹಲಿಗೆ ಪ್ರಯಾಣಿಸಿದರು. ಆ್ಯಂಬುಲೆನ್ಸ್‌ನಲ್ಲಿ ವೈದ್ಯರ ತಂಡ ಹಿಂಬಾಲಿಸಿತು. ಪಂಚಕುಲದಲ್ಲಿ ಕೊಂಚ ಸಮಯ ವಾಹನ ನಿಲ್ಲಿಸಿ, ಬಳಿಕ ದೆಹಲಿಗೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ’ ಎಂದು ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ರಮೇಶ್‌ ಚಂದ್‌ ತಿಳಿಸಿದ್ದಾರೆ.