ಕೋಲ್ಕತ್ತಾ(ನ.20): ಕಪ್ಪು ಹಣದ ಬೇಟೆಎಗೆ ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂ. ನೋಟುಗಳನ್ನ ರದ್ದು ಮಾಡಿ ಐತಿಹಾಸಿಕ ಆದೇಶ ಮಾಡಿದ ಬಳಿಕ ದೇಶಾದ್ಯಂತ ಅದೆಷ್ಟೋ ವ್ಯಾಪಾರ-ವ್ಯವಹಾರಗಳು ಗಣನೀಯ ಪ್ರಮಾಣದಲ್ಲಿ ಕುಸಿದಿವೆ. ಆದರೆ, ದಕ್ಷಿಣ ಏಷ್ಯಾದ ಅತಿದೊಡ್ಡ ರೆಡ್ ಲೈಟ್ ಏರಿಯಾ ಎಂದು ಹೇಳಲಾಗುವ ಕೋಲ್ಕತ್ತಾದ ಸೋನಾಗಚಿಯಲ್ಲಿ ವೇಶ್ಯೆಯರ ಆದಾಯ ಮಾತ್ರ ಎರ್ರಾಬಿರ್ರಿ ಏರಿಕೆ ಕಂಡಿದೆ. ನೋಟ್ ಬ್ಯಾನ್ ಆದ ಕೇವಲ 2 ದಿನಗಳಲ್ಲಿ ಈ ಪ್ರದೇಶದಲ್ಲಿ 50 ಲಕ್ಷದಷ್ಟು ದಾಖಲೆಯ ವ್ಯವಹಾರವಾಗಿದೆ ಎಂದು ಡೈಲಿ ಭಾಸ್ಕರ್ ವರದಿ ಮಾಡಿದೆ.

ಸೆಕ್ಸ್ ವರ್ಕರ್`ಗಳಿಗಾಗಿಯೇ ನಡೆಯುತ್ತಿರುವ ಉಷಾ ಮಲ್ಟಿಪರ್ಪಸ್ ಕೋಆಪರೇಟಿವ್ ಬ್ಯಾಂಕ್`ನ ದಾಖಲೆಗಳು ಈ ವ್ಯವಹಾರದ ಗುಟ್ಟನ್ನ ಬಿಚ್ಚಿಟ್ಟಿವೆ. ಒಂದು ವಾರ ಹಳೇ ನೋಟುಗಳನ್ನ ಪಡೆಯುವುದಾಗಿ ವೇಶ್ಯೆಯರು ಹೇಳಿದ್ದೇ ತಡ ಗ್ರಾಹಕರು ಮುಗಿಬಿದ್ದಿದ್ದಾರೆ. ಸಾಮಾನ್ಯ ದಿನಗಳಲ್ಲಿ ಇಲ್ಲಿ 5 ಲಕ್ಷದಷ್ಟು ನಡೆಯುತ್ತಿದ್ದ ವ್ಯವಹಾರ 55 ಲಕ್ಷಕ್ಕೆ ಏರಿಕೆಯಾಗಿದೆಯಂತೆ.

 `ನಾವೇನಾದರೂ ಹಳೇ ನೋಟುಗಳನ್ನ ತಿರಸ್ಕರಿಸಿದ್ರೆ ನಮ್ಮ ಬ್ಯುಸಿನೆಸ್ ಕುಸಿಯುತ್ತಿತ್ತು. ಉಷಾ ಬ್ಯಾಂಕ್`ನವರು ಹಳೇ ನೋಟುಗಳನ್ನ ಪಡೆಯುವುದಾಗಿ ಭರವಸೇ ನೀಡಿದ್ದರು. ಅದರ ಾಧಾರದ ಮೇಲೆ ಹಳೇ ನೋಟನ್ನ ಪಡೆದೆವು. ಇದರಿಂದ ವ್ಯವಹಾರ ಭಾರೀ ಪ್ರಮಾನದಲ್ಲಿ ಹೆಚ್ಚಿದೆ ಎಂದು ಸೆಕ್ಸ್ ವರ್ಕರ್ ಒಬ್ಬರು ಹೇಳಿದ್ಧಾರೆ.