ಶನಿವಾರ ರಾತ್ರಿ ಮನೆಗೆ ಬಂದ ರತಿರಾಮ್, ತನ್ನ ಸೊಸೆಯನ್ನ ಹಿಡಿದು ಎಳೆದಾಡಿದ್ದಾನೆ. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ಧಾನೆ.

ಕಾನ್ಪುರ(ಸೆ.26): ತನ್ನ ಹೆಂಡತಿಯನ್ನ ಲೈಂಗಿಕ ಕ್ರಿಯೆಗಾಗಿ ಎಳೆದಾಡಿದ ಅಪ್ಪನಿಗೆ ಮಗನೇ ಗುಂಡಿಕ್ಕಿರುವ ಘಟನೆ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಇಮಾದ್ಪುರ್`ನ ತಮಾರ್ ಪ್ರದೇಶದ 28 ವರ್ಷದ ಅಮಿತ್, ತನ್ನ ಕಾಮುಕ ತಂದೆ ರತಿರಾಮ್`ಗೆ ಗುಂಡು ಹೊಡೆದಿದ್ಧಾನೆ ಎಂದು ಪೊಲೀಸ್ ವರದಿಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಶಂಶಬಾದ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಲಲಿತೇಶ್ ತ್ರಿಪಾಠಿ ಹೇಳುವ ಪ್ರಕಾರ, ಶನಿವಾರ ರಾತ್ರಿ ಮನೆಗೆ ಬಂದ ರತಿರಾಮ್, ತನ್ನ ಸೊಸೆಯನ್ನ ಹಿಡಿದು ಎಳೆದಾಡಿದ್ದಾನೆ. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ಧಾನೆ. ಹಲವು ಬಾರಿ ಅಪ್ಪನ ಚೇಷ್ಟೆಯನ್ನ ಕಂಡು ಬೇಸತ್ತಿದ್ದ ಪಕ್ಕ ಕೋಣೆಯಲ್ಲಿದ್ದ ಪುತ್ರ ಕಾಮುಕ ತಂದೆಯನ್ನ ಹಿಡಿದೆಳೆದು ಥಳಿಸಿದ್ಧಾನೆ. ಬಳಿಕ ಬಂದೂಕಿನಿಂದ ಶೂಟ್ ಮಾಡಿದ್ದಾನೆ. ಗಂಭೀರ ಗಾಯಗೊಂಡಿರುವ ರತಿರಾಮ್`ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃಪೆ: ಟೈಮ್ಸ್ ಆಫ್ ಇಂಡಿಯಾ