ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಪೋಷಕರೇ ಎಚ್ಚರ. ಯಾಕೆಂದರೆ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ಬಯಲಾಗಿದೆ. ಫೇಸ್'ಬುಕ್ ಚಟಕ್ಕೆ ಬಿದ್ದ ಮಗ ತನ್ನ ತಂದೆ-ತಾಯಿ ಮರ್ಯಾದೆ ಹರಾಜು ಹಾಕಿದ್ದಾನೆ.
ಬೆಂಗಳೂರು(ಮೇ.26): ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಪೋಷಕರೇ ಎಚ್ಚರ. ಯಾಕೆಂದರೆ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ಬಯಲಾಗಿದೆ. ಫೇಸ್'ಬುಕ್ ಚಟಕ್ಕೆ ಬಿದ್ದ ಮಗ ತನ್ನ ತಂದೆ-ತಾಯಿ ಮರ್ಯಾದೆ ಹರಾಜು ಹಾಕಿದ್ದಾನೆ.
13 ವರ್ಷದ ಮಗ ಫೇಸ್ಬುಕ್'ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಾನೆ. ಅಷ್ಟರಲ್ಲೇ ಆತನ ಫೇಸ್ಬುಕ್ ಅಕೌಂಟ್'ಗೆ ತೇಜಲ್ ಪಟೇಲ್ ಎನ್ನುವ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಹಿಂದೂ ಮುಂದೂ ನೋಡದೇ ಬಾಲಕ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಂಡಿದ್ದಾನೆ. ನಂತರ ತೇಜಲ್ ಪಟೇಲ್, ಬಾಲಕನಿಗೆ ನಿರಂತರವಾಗಿ ಅಶ್ಲೀಲ ಫೋಟೋ, ವಿಡಿಯೋ ಕಳಿಸುತ್ತಿದ್ದು, ಬಳಿಕ ನಿಮ್ಮ ಅಪ್ಪ-ಅಮ್ಮನ ಸರಸ ಸಲ್ಲಾಪದ ವಿಡಿಯೋ ಕಳಿಸು ಅಂತ ಬಾಲಕನಿಗೆ ಹೇಳಿದ್ದಾನೆ. ಮುಂದೆ ಪರಿಣಾಮ ಏನಾಗಬಹುದು ಎಂದು ಯೋಚಿಸದ ಬಾಲಕ ಮೊಬೈಲ್'ನಲ್ಲಿ ತನ್ನ ಪೋಷಕರ ಏಕಾಂತದ ವಿಡಿಯೋ ಕಳಿಸಿದ್ದಾನೆ.
ಆ ವಿಡಿಯೋ ಇಟ್ಟುಕೊಂಡ ಖತರ್ನಾಕ್ ತೇಜಸ್, ಬಾಲಕನ ಅಪ್ಪನಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾನೆ. ಇದೀಗ ಬಾಲಕನ ಪೋಷಕರು ಇದೇ ತಿಂಗಳ 20ರಂದು ಸಿಐಡಿಗೆ ದೂರು ನೀಡಿದ್ದಾರೆ.
