ಅಪಹರಣಕ್ಕೊಳಗಾದ ಬಾಲಕ ಮಯಾಂಕ್'ನು ನಾರಾಯಣ ಇ-ಟೆಕ್ನೊ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಬೆಂಗಳೂರು(ನ. 26): ಉದ್ಯಾನನಗರಿಯಲ್ಲಿ ಮತ್ತೊಂದು ಅಪಹರಣ ಪ್ರಕರಣ ಘಟಿಸಿದೆ. ಉದ್ಯಮಿ ಹರೀಶ್ ಎಂಬುವವರ ಪುತ್ರ ಮಯಾಂಕ್(10)ನ ಅಪಹರಣವಾಗಿದೆ. ಕೆ.ಆರ್.ಪುರದ ಅಯ್ಯಪ್ಪನಗರದಲ್ಲಿ ಅಪಹರಣಕಾರರು ಬೆಳಗ್ಗೆ ಗಂಟೆಗೆ ಬಾಲಕನನ್ನು ಕಿಡ್ನಾಪ್ ಮಾಡಿದ್ದಾರೆ. ಅಪಹರಣಕ್ಕೊಳಗಾದ ಬಾಲಕ ಮಯಾಂಕ್'ನು ನಾರಾಯಣ ಇ-ಟೆಕ್ನೊ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಶಾಲೆಗೆ ಹೋದಾಗಲೇ ಆತನ ಅಪಹರಣವಾಗಿದೆ. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಬಾಲಕನ ಪೋಷಕರು ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
