ಪ್ರೇಯಸಿ ಆಸೆಯಂತೆ ಸರ್ಕಾರಿ ನೌಕರನಾಗಲು ತಂದೆ ಕೊಲೆಗೈದ!

news | Sunday, February 11th, 2018
Suvarna Web Desk
Highlights

ಪ್ರೇಯಸಿಯನ್ನೇ ವಿವಾಹವಾಗಲು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಯುವಕನೋರ್ವ ತಂದೆಯ ಕತ್ತನ್ನೇ ಸೀಳಿ ಹತ್ಯೆಗೈದಿರುವ ಭೀಕರ ಮತ್ತು ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ನವದೆಹಲಿ: ಪ್ರೇಯಸಿಯನ್ನೇ ವಿವಾಹವಾಗಲು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಯುವಕನೋರ್ವ ತಂದೆಯ ಕತ್ತನ್ನೇ ಸೀಳಿ ಹತ್ಯೆಗೈದಿರುವ ಭೀಕರ ಮತ್ತು ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತಂದೆಯನ್ನೇ ಹತ್ಯೆಗೈದ ನಿಷ್ಕರುಣಿ ಪಾಪಿ ಆರೋಪಿಯನ್ನು ಆರೋಪಿಯನ್ನು ತರುಣ್‌ ಪಾಲ್‌(22) ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ದುರ್ದೈವಿಯನ್ನು ಅಂಚೆ ಇಲಾಖೆಯಲ್ಲಿ ಪೋಸ್ಟ್‌ಮ್ಯಾನ್‌ ಆಗಿದ್ದ ಚಂದ್ರಪಾಲ್‌(57) ಎಂದು ಗುರುತಿಸಲಾಗಿದೆ.

ಸರ್ಕಾರಿ ಉದ್ಯೋಗವಿದ್ದರಷ್ಟೇ ನಿನ್ನನ್ನು ವಿವಾಹವಾಗುವುದಾಗಿ ಹೇಳಿದ್ದ ತನ್ನ ಪ್ರೇಯಸಿಯ ಮಾತಿನಿಂದ ಹತಾಶೆಗೊಳಗಾಗಿದ್ದ ಆರೋಪಿ, ಬೇರೆ ದಾರಿ ಕಾಣದೇ ತಂದೆಯನ್ನೇ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಕಝ್ಮಾಬಾದ್‌ ಗ್ರಾಮದ ಅರಣ್ಯದ ಬಳಿ ಚಂದ್ರಪಾಲ್‌ ಅವರ ಶವ ಪತ್ತೆಯಾಗಿತ್ತು.

ಈ ಕುರಿತು ತನಿಖೆ ಕೈಗೊಂಡ ಸಂದರ್ಭದಲ್ಲಿ ತರುಣ್‌ನ ಚಟುವಟಿಕೆಗಳು ಅನುಮಾನಾಸ್ಪದವಾಗಿದ್ದವು. ಈ ಹಿನ್ನೆಲೆಯಲ್ಲಿ ಆತನ ವಿಚಾರಣೆ ನಡೆಸಿದ ವೇಳೆ, ತಾನೇ ತಂದೆಯ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments 0
Add Comment