ಹೆತ್ತಮ್ಮನನ್ನೇ ಹತ್ಯೆ ಮಾಡಿ ಶೌಚದ ಗುಂಡಿಗೆ ಹಾಕಿದ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 29, Jul 2018, 9:02 AM IST
Son Killed Mother In Channapatna
Highlights

ಹೆತ್ತಮ್ಮನನ್ನೇ ಹತ್ಯೆ ಮಾಡಿದ ಪುತ್ರನೋರ್ವ ಶವವನ್ನು ಶೌಚದ ಗುಂಡಿಗೆ ಹಾಕಿ ಮುಚ್ಚಿದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. 

ಚನ್ನಪಟ್ಟಣ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಪುತ್ರ ಆಕೆಯ ಶವವನ್ನು ಶೌಚದ ಗುಂಡಿಯಲ್ಲಿ ಹೂತು ಹಾಕಿದ ಘಟನೆ ತಾಲೂಕಿನ ನಾಗವಾರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗಮ್ಮ (70) ಎಂಬುವರೇ ಮಗನಿಂದಲೇ ಕೊಲೆಯಾದವರು.

ಸುರೇಶ್(38) ಎಂಬಾತನೇ ತಾಯಿಯನ್ನೇ ಕೊಲೆ ಮಾಡಿದ ಆರೋಪಿ. ಸದ್ಯ ಆರೋಪಿಯನ್ನು ಎಂ. ಕೆ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕನಾದ ಸುರೇಶ್ ಸಾಕಷ್ಟು ಸಾಲ ಮಾಡಿಕೊಂಡಿದ್ದು, ತನ್ನ ಹೆಸರಿಗೆ ಜಮೀನು ವರ್ಗಾವಣೆ ಮಾಡುವಂತೆ ನಾಗಮ್ಮ ನನ್ನು ಪದೇ ಪದೆ ಪೀಡಿಸುತ್ತಿದ್ದ. ತಾಯಿ ಜಮೀನನ್ನು ನೀಡಲು ಒಪ್ಪದ ಹಿನ್ನೆಲೆಯಲ್ಲಿ ಆಕೆಯನ್ನು ಬೆಡ್‌ಶೀಟ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯ ಹಿತ್ತಲಿನಲ್ಲಿದ್ದ ಶೌಚಾಲಯದ ಗುಂಡಿಯಲ್ಲಿ ಹಾಕಿದ್ದ.

loader