ಬೆಂಗಳೂರಿನ ಪ್ರಮುಖ ಕ್ಷೇತ್ರದಲ್ಲಿ ಅಪ್ಪನ ಬದಲು ಮಗ ಸ್ಪರ್ಧಿಸುತ್ತಿದ್ದಾರೆ?

First Published 4, Mar 2018, 4:36 PM IST
Son Contest Behalf Father
Highlights

ಇನ್ನು ಬಿಜೆಪಿಯಲ್ಲಿ ನಗರ ವಕ್ತಾರ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರ ಹೆಸರು ಚಲಾವಣೆಯಲ್ಲಿದೆ.

ಕಾಂಗ್ರೆಸ್‌ನ ಹಾಲಿ ಶಾಸಕ ಆರ್.ವಿ. ದೇವರಾಜು ಅವರಿಗೆ ಮರು ಆಯ್ಕೆಯ ಬಯಕೆಯಿದ್ದರೂ, ಆರೋಗ್ಯ ಸಹಕರಿಸುತ್ತಿಲ್ಲ ಎಂಬ ಮಾತಿದೆ. ಒಂದು ವೇಳೆ ದೇವರಾಜು ಅವರಿಗೆ ಟಿಕೆಟ್ ತಪ್ಪುವುದಾದರೇ ಅದು ಅವರ ಕುಟುಂಬಕ್ಕೆ ಸಿಗುವ ಸಾಧ್ಯತೆಯೇ ಹೆಚ್ಚು. ಅವರ ಪುತ್ರ ಯುವರಾಜ್ ಈಗಾಗಲೇ ರಾಜಕೀಯದಲ್ಲಿದ್ದು, ಕಾರ್ಪೊರೇಟರ್ ಆಗಿದ್ದಾರೆ. ಜತೆಗೆ, ದೇವರಾಜು ಅವರ ಪತ್ನಿಯ ಹೆಸರೂ ಕೇಳಿಬರುತ್ತಿದೆ.

ಇನ್ನು ಬಿಜೆಪಿಯಲ್ಲಿ ನಗರ ವಕ್ತಾರ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರ ಹೆಸರು ಚಲಾವಣೆಯಲ್ಲಿದೆ. ಅವರೊಂದಿಗೆ ಉದ್ಯಮಿ ಉದಯ್ ಗರುಡಾಚಾರ್, ಮಾಜಿ ಶಾಸಕ ಹೇಮಚಂದ್ರ ಸಾಗರ್, ಬಿಬಿಎಂಪಿ ಸದಸ್ಯ ಕೆಂಪೇಗೌಡ ಅವರೂ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ಪಕ್ಷದಿಂದ ಬೆಂಗಳೂರು ನಗರ ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷೆ ಲತಾ ಶಿವಕುಮಾರ್ ಅವರ ಹೆಸರು ಮುಂಚೂಣಿಯಲ್ಲಿದೆ.

loader