ಕವರ್‌ನಲ್ಲಿ ಹಾಕಿ ಹುಲಿ ಕೊರಿಯರ್‌ ಮಾಡಿದ್ರು!

First Published 10, Feb 2018, 7:53 AM IST
Someone tried to mail a Tiger cub
Highlights

ಕೊರಿಯರ್‌ ಮೂಲಕ ಔಷಧಿ, ಸಾಂಬರ್‌ ಪದಾರ್ಥ ಸೇರಿದಂತೆ ಇತರ ಪದಾರ್ಥಗಳನ್ನು ತರಿಸಿಕೊಳ್ಳುವುದು ಮತ್ತು ರಫ್ತು ಮಾಡುವುದು ಅಂಥ ಮಹತ್ವದ ವಿಚಾರವೇನಲ್ಲ ಬಿಡಿ. ಅಲ್ಲದೆ, ವಿದೇಶಗಳಿಂದ ಮುದ್ದಾದ ನಾಯಿ ಮರಿಗಳು ಮತ್ತು ಶ್ವಾನಗಳನ್ನು ತರಿಸಿಕೊಳ್ಳಲಾಗುತ್ತದೆ.

ಮೆಕ್ಸಿಕೋ: ಕೊರಿಯರ್‌ ಮೂಲಕ ಔಷಧಿ, ಸಾಂಬರ್‌ ಪದಾರ್ಥ ಸೇರಿದಂತೆ ಇತರ ಪದಾರ್ಥಗಳನ್ನು ತರಿಸಿಕೊಳ್ಳುವುದು ಮತ್ತು ರಫ್ತು ಮಾಡುವುದು ಅಂಥ ಮಹತ್ವದ ವಿಚಾರವೇನಲ್ಲ ಬಿಡಿ. ಅಲ್ಲದೆ, ವಿದೇಶಗಳಿಂದ ಮುದ್ದಾದ ನಾಯಿ ಮರಿಗಳು ಮತ್ತು ಶ್ವಾನಗಳನ್ನು ತರಿಸಿಕೊಳ್ಳಲಾಗುತ್ತದೆ.

ಆದ್ರೆ, ಇದಕ್ಕಾಗಿ ಪ್ರತ್ಯೇಕವಾದ ಕಂಟೇನರ್‌ಗಳಿರುತ್ತವೆ. ಆದ್ರೆ, ಬದುಕಿರುವ ಹುಲಿ ಮರಿಯೊಂದನ್ನು ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಸಾಗಿಸಿದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಮೆಕ್ಸಿಕೋದ ಜಲಿಸ್ಕೋನಲ್ಲಿರುವ ನ್ಯೂಟ್ಲಾಕ್ಯೂಪಕ್‌ ಕೇಂದ್ರ ಬಸ್‌ ನಿಲ್ದಾಣದಲ್ಲಿದ್ದ ಪ್ಲಾಸ್ಟಿಕ್‌ ಕಂಟೇನರ್‌ನಲ್ಲಿ ಹುಲಿಯ ಮರಿಯಿರುವುದನ್ನು ಪೊಲೀಸರ ಗಸ್ತು ಶ್ವಾನವೊಂದು ಪತ್ತೆ ಹಚ್ಚಿದೆ. ಉಸಿರಾಡಲು ಸಾಧ್ಯವಾಗದ ಕಂಟೇನರ್‌ನಲ್ಲಿ ನಿರ್ಜಲೀಕರಣಕ್ಕೊಳಗಾದ ಹೊರತಾಗಿಯೂ, ಹುಲಿ ಮರಿ ಆರೋಗ್ಯ ಸ್ಥಿರವಾಗಿದ್ದು, ಅದನ್ನು ರಕ್ಷಣೆ ಮಾಡಲಾಗಿದೆ.

loader