ದೇಶದ ಭದ್ರತೆಯ ಉಸ್ತುವಾರಿ ಹೊತ್ತಿರುವ ಕೇಂದ್ರ ಗೃಹ ಸಚಿವಾಲಯದಲ್ಲೇ, ಕೆಲ ಕಿರಿಯ ಸಿಬ್ಬಂದಿಗಳು ಕಚೇರಿ ಕಂಪ್ಯೂಟರ್‌ನಲ್ಲಿ ನೀಲಿ ಚಿತ್ರಗಳನ್ನು ವೀಕ್ಷಿಸುವುದೂ ಅಲ್ಲದೆ, ಅಲ್ಲೇ ಚಿತ್ರಗಳನ್ನು ಡೌನ್‌ಲೋಡ್‌ ಕೂಡಾ ಮಾಡಿಕೊಳ್ಳುತ್ತಾರೆ ಎಂಬ ಆತಂಕದ ವಿಷಯ ಹೊರಬಿದ್ದಿದೆ.
ಮುಂಬೈ: ದೇಶದ ಭದ್ರತೆಯ ಉಸ್ತುವಾರಿ ಹೊತ್ತಿರುವ ಕೇಂದ್ರ ಗೃಹ ಸಚಿವಾಲಯದಲ್ಲೇ, ಕೆಲ ಕಿರಿಯ ಸಿಬ್ಬಂದಿಗಳು ಕಚೇರಿ ಕಂಪ್ಯೂಟರ್ನಲ್ಲಿ ನೀಲಿ ಚಿತ್ರಗಳನ್ನು ವೀಕ್ಷಿಸುವುದೂ ಅಲ್ಲದೆ, ಅಲ್ಲೇ ಚಿತ್ರಗಳನ್ನು ಡೌನ್ಲೋಡ್ ಕೂಡಾ ಮಾಡಿಕೊಳ್ಳುತ್ತಾರೆ ಎಂಬ ಆತಂಕದ ವಿಷಯ ಹೊರಬಿದ್ದಿದೆ.
ಕೇಂದ್ರ ಗೃಹ ಸಚಿವಾಲಯದ ಮಾಜಿ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರೇ ಇಂಥದ್ದೊಂದು ಮಾಹಿತಿ ಬಹಿರಂಗಪಡಿಸಿದ್ದಾರೆ.
‘8-9 ವರ್ಷಗಳ ಹಿಂದೆ ನಾನು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ವೇಳೆ, ಹಿರಿಯ ಅಧಿಕಾರಿಗಳೆಲ್ಲಾ ಸಂಜೆ ಬಹಳ ಹೊತ್ತು ಕಚೇರಿಯಲ್ಲೇ ಕೆಲಸದಲ್ಲಿ ಮುಳುಗಿರುತ್ತಿದ್ದೆವು. ಈ ವೇಳೆ ಅನಿವಾರ್ಯವಾಗಿ ಕಚೇರಿಯಲ್ಲೇ ಇರಬೇಕಾಗಿರುತ್ತಿದ್ದ ಕಿರಿಯ ಸಿಬ್ಬಂದಿಗಳು, ಕಚೇರಿ ಕಂಪ್ಯೂಟರ್ನಲ್ಲೇ ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡಿ, ಡೌನ್ಲೋಡ್ ಮಾಡುತ್ತಿದ್ದರು.
ಪರಿಣಾಮ ಇಂಥ ವೆಬ್ಗಳ ಮೂಲಕ ವೈರಸ್ ಕಂಪ್ಯೂಟರ್ ಮೇಲೆ ದಾಳಿ ನಡೆಸುತ್ತಿತ್ತು. ಹೀಗಾಗಿ ಪ್ರತಿ 2 ತಿಂಗಳಿಗೊಮ್ಮೆ ಅವುಗಳನ್ನು ದುರಸ್ತಿ ಮಾಡಬೇಕಾಗಿ ಬರುತ್ತಿತ್ತು ಎಂದು ಕಾರ್ಯಕ್ರಮವೊಂದರಲ್ಲಿ ಪಿಳ್ಳೈ ಹೇಳಿದ್ದಾರೆ.
