ಕೆಲ ಕಾಂಗ್ರೆಸ್ಸಿಗರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಗೌಡ

First Published 4, Apr 2018, 8:25 AM IST
Some Congress Leaders Contact With BJP
Highlights

ಕಾಂಗ್ರೆಸ್‌ನ ಕೆಲ ನಾಯಕರು ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಂಥವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸಲಹೆ ನೀಡಿದ್ದಾರೆ.

ಚನ್ನಪಟ್ಟಣ/ರಾಮನಗರ: ಕಾಂಗ್ರೆಸ್‌ನ ಕೆಲ ನಾಯಕರು ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಂಥವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸಲಹೆ ನೀಡಿದ್ದಾರೆ.

ಜೆಡಿಎಸ್‌ ವಿಕಾಸಪರ್ವ ಸಮಾವೇಶ ಉದ್ಘಾಟಿಸಿದ ಅವರು, ಜೆಡಿಎಸ್‌ ಸಂಘ ಪರಿವಾರದ ಬಿ ಟೀಮ್‌ ಎಂಬ ಹೇಳಿಕೆ ರಾಹುಲ್‌ ರವರ ಸ್ವಂತ ಬುದ್ಧಿಯಿಂದ ಬಂದಿದ್ದಲ್ಲ.

ಬಿಜೆಪಿ ನಾಯಕ ಯಡಿಯೂರಪ್ಪನವರ ಮನೆಯಲ್ಲಿ ಕಾಲ ಕಳೆದು ಹತ್ತಾರು ಅನುಕೂಲ ಪಡೆದ ಕಾಂಗ್ರೆಸ್‌ ನಾಯಕ ನೀಡಿದ ಚೀಟಿಯನ್ನು ಓದಿ ರಾಹುಲ್‌ ಗಾಂಧಿ ಜೆಡಿಎಸ್‌ ಪಕ್ಷವನ್ನು ಸಂಘ ಪರಿವಾರದ ‘ಬಿ’ ಟೀಮ್‌ ಎನ್ನುತ್ತಾರೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ಅವರು ವಯಸ್ಸಿನಲ್ಲಿ ಇನ್ನೂ ಚಿಕ್ಕವರಾಗಿದ್ದು, ಏನೂ ತಿಳಿಯದ ಅವರ ಕೈಯಲ್ಲಿ ಬೇರೆಯವರು ಹೇಳಿಸುತ್ತಾರೆ ಎಂದರು.

loader