ಎಂಎಲ್’ಎ ಕ್ಯಾಂಡಿಡೇಟ್ ಎಂದು ಹೇಳಿಕೊಂಡು ಜನರಿಗೆ ಮೋಸ

news | Friday, April 6th, 2018
Suvarna Web Desk
Highlights

ಎಂಎಲ್ ಎ ಕ್ಯಾಂಡಿಡೇಟ್ ಎಂದು ಜನರಿಗೆ ಮೋಸ ಮಾಡುತ್ತಿದ್ದ ಎಲ್ ಸೋಮಣ್ಣ ಎಂಬಾತನನ್ನು ಕಳೆದೆರಡು ದಿನಗಳ ಹಿಂದೆ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು.

 ಬೆಂಗಳೂರು : ಎಂಎಲ್ ಎ ಕ್ಯಾಂಡಿಡೇಟ್ ಎಂದು ಜನರಿಗೆ ಮೋಸ ಮಾಡುತ್ತಿದ್ದ ಎಲ್ ಸೋಮಣ್ಣ ಎಂಬಾತನನ್ನು ಕಳೆದೆರಡು ದಿನಗಳ ಹಿಂದೆ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು.

ಇದೀಗ ಈತನ ವಿರುದ್ಧ ಇದೀಗ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡವರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ ಸೋಮಣ್ಣನ ವಿರುದ್ದ ಈಗಾಗಲೇ 25ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ನಿವೇಶನ,ಸರ್ಕಾರಿ ಕೆಲಸ ಕೊಡಿಸುವುದಾಗಿ ಈತ ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾನೆ.  ಬಿಎಸ್ ಆರ್ ಕಾಂಗ್ರೆಸ್ ನಲ್ಲಿ ಎಂಎಲ್ ಎ ಕ್ಯಾಂಡಿಡೇಟ್ ಎಂದು ಜನರಿಗೆ ಮಂಕುಭೂದಿ ಎರಚಿದ್ದ ಎನ್ನುವ ವಿಚಾರವು ಇದೀಗ ಬೆಳಕಿಗೆ ಬಂದಿದೆ.

 ಇತ್ತೀಚೆಗೆ ನಂಜನಗೂಡಿನ ಜೆಡಿಎಸ್ ಎಂಎಲ್ ಎ ಕ್ಯಾಂಡಿಡೇಟ್ ಎಂದು ಹೇಳಿಕೊಂಡಿದ್ದ. ಎಂಎಲ್ ಎ ಎಂದು ಚಿನ್ನದ ವ್ಯಾಪಾರಿಗಳಿಂದ ಸಾಮೂಹಿಕ ಮದುವೆಯ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಚಿನ್ನಾಭರಣ ಲೂಟಿ ಮಾಡಿದ್ದ.

Comments 0
Add Comment