Asianet Suvarna News Asianet Suvarna News

ಮ್ಯೂಸಿಯಂನಲ್ಲಿ ಚಿನ್ನದ ಟಾಯ್ಲೆಟ್‌!

Solid gold toilet to serve the public at Guggenehim
  • Facebook
  • Twitter
  • Whatsapp

ನ್ಯೂಯಾರ್ಕ್(ಸೆ.19): ಇಟಲಿಯ ಖ್ಯಾತ ಕಲಾವಿದ ಮೌರಿಜೋ ಕ್ಯಾಟಿಲ್ಯಾನ್‌, ನ್ಯೂಯಾರ್ಕ್‌ನ ಮ್ಯೂಸಿಯಂನಲ್ಲಿ ಇದುವರೆಗೆ ಕಂಡುಕೇಳರಿಯದ ಕಲಾ  ಕೃತಿಯೊಂದನ್ನು ಪ್ರದರ್ಶಿಸಿದ್ದಾರೆ. ಅದು ಎಲ್ಲರ ಗಮನ ಸೆಳೆಯುತ್ತಿದೆ.

18 ಕ್ಯಾರೆಟ್‌ ಚಿನ್ನದಿಂದ ತಯಾರಿಸಿರುವ ಟಾಯ್ಲೆಟ್‌ ಎಲ್ಲರ ಗಮನ ಸೆಳೆಯುತ್ತಿದೆ. ಅಮೆರಿಕ' ಹೆಸರಿನ ಈ ಚಿನ್ನದ ಟಾಯ್ಲೆಟ್‌ ಕೂಡ ಒಂದು ಕಲಾಕೃತಿಯಾಗಿದ್ದು, ಇದನ್ನು ಮ್ಯೂಸಿಯಂನ 4ನೇ ಮಹಡಿಯಲ್ಲಿನ ಶೌಚಾಲಯದಲ್ಲಿ ಅಳವಡಿಸಲಾಗಿದೆ. ಇತರ ಸಾಮಾನ್ಯ ಕಮೋಡ್‌'ನಂತೆ ಇದನ್ನು ಬಳಸಬಹುದು.

ಮ್ಯೂಸಿಯಂಗೆ ಬರುವ ಪ್ರತಿಯೊಬ್ಬರಿಗೂ ಇದನ್ನು ಬಳಸಿ ನೋಡುವ ಅವಕಾಶ ಇದೆ. ಚಿನ್ನದ ಟಾಯ್ಲೆಟ್‌ ಇರುವ ಶೌಚಾಲಯದ ಹೊರಗೆ ಓರ್ವ ಭದ್ರತಾ ಸಿಬಂದಿಯನ್ನೂ ನಿಯೋಜಿಸಲಾಗಿದೆ. 

 

Follow Us:
Download App:
  • android
  • ios