ಸಿಯಾಚಿನ್(ಜೂ.08): ದೇಶದ ಗಡಿ ರಕ್ಷಿಸುವ ಅದಮ್ಯ ಬಯಕೆ ಅವರನ್ನು ಎಲ್ಲ ಕಷ್ಟಗಳನ್ನು ಸಹಿಸಿಕೊಳ್ಳುವಂತೆ ಮಾಡುತ್ತದೆ. ಕೊರೆಯುವ ಚಳಿಗೆ ಮೈಯೊಡ್ಡಿ ನಿಲ್ಲುವ ನಮ್ಮ ಧೀರ ಯೋಧ, ಮಾತೃಭೂಮಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾನೆ.

ಅದರಂತೆ ವಿಶ್ವದ ಅತ್ಯಂತ ಎತ್ತರದ ಭೂಮಿ ಸಿಯಾಚಿನ್'ನಲ್ಲಿ ಭಾರತೀಯ ಸೇನೆಯ ಯೋಧ ಅದೆಂತಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ತಾಯಿ ಭಾರತಾಂಬೆಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾನೆ ಎಂಬುದರ ಕುರಿತಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. 

ಸಿಯಾಚಿನ್ ಗಡಿ ಕಾಯುತ್ತಿರುವ ಯೋಧರಿಗಾಗಿ ಕೊಡಲಾದ ಜ್ಯೂಸ್ ತೀವ್ರ ಚಳಿಒಗೆ ಗಟ್ಟಿಯಾಗಿದ್ದು, ಅದನ್ನು ಒಡೆದು ತಿನ್ನಲು ಸಹ ಆಗದ ಪರಿಸ್ಥಿತಿ ಯಲ್ಲೂ ನಗು ಮೊಗ ಹೊತ್ತು ದೇಶಸೇವೆ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಯೋಧರು ಗಟ್ಟಿಯಾಗಿರುವ ಜ್ಯೂಸ್ ನ್ನು ಸುತ್ತಿಗೆಯಿಂದ ಒಡೆಯಲು ಪ್ರಯತ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ. ಅದರಂತೆ ಚಳಿಯಿಂದಾಗಿ ಮೊಟ್ಟೆ ಕೂಡ ಗಟ್ಟಿಗೊಂಡಿದ್ದು, ಅದನ್ನೂ ಕೂಡ ಒಡೆಯಲು ಸಾಧ್ಯವಾಗುತ್ತಿಲ್ಲ.

ಮೈನಸ್ 40 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪಮಾನ ಹೊಂದಿರುವ ಸಿಯಾಚಿನ್'ನಲ್ಲಿ ಎಲ್ಲ ಕಷ್ಟಗಳಿಗೆ ಎದೆಯೊಡ್ಡಿ ದೇಶ ರಕ್ಷಣೆಯಲ್ಲಿ ನಿರತರಾಗಿರುವ ನಮ್ಮ ವೀರ ಸೈನಿಕರಿಗೆ ಪ್ರತಿಯೊಬ್ಬ ಭಾರತೀಯ ಸಲಾಂ ಹೇಳಲೇಬೇಕು.