ಅಮೆರಿಕಾದಲ್ಲಿ ಶತಮಾನದ ಖಗ್ರಾಸ ಸೂರ್ಯ'ಗ್ರಹಣ
ಶತಮಾನದ ಬಳಿಕ ಇದೇ ಮೊದಲ ಬಾರಿಗೆ ಇಡೀ ಅಮೆರಿಕದಲ್ಲಿಂದು ಖಗ್ರಾಸ ಸೂರ್ಯಗ್ರಹಣ ಗೋಚರಿಸಿತು. ಇದನ್ನು ಗ್ರೇಟ್ ಅಮೆರಿಕನ್ ಸೋಲಾರ್ ಎಕ್ಲಿಪ್ಸ್ ಎಂದು ಬಣ್ಣಿಸಲಾಗಿದೆ. ಆದ್ರೆ ಭಾರತದಲ್ಲಿ ಗೋಚರಿಸಲಿಲ್ಲ. ಭಾರತದ ಕಾಲಮಾನದ ಪ್ರಕಾರ ರಾತ್ರಿ 9.16ಕ್ಕೆ ಆರಂಭವಾದ ಸೂರ್ಯಗ್ರಹಣ, 11.55ಕ್ಕೆ ಪೂರ್ಣ ಪ್ರಮಾಣದಲ್ಲಿ ಖಗ್ರಾಸಗೊಂಡು, ಮಧ್ಯರಾತ್ರಿ 1ರವರೆಗೂ ಗೋಚರಿಸಲಿದೆ . ಸುಮಾರು 3 ಗಂಟೆಗಳ ಕಾಲ ಗೋಚರಿಸಲಿರುವ ಗ್ರಹಣದಲ್ಲಿ ಸುಮಾರು 3 ನಿಮಿಷಗಳ ಕಾಲ ಸಂಪೂರ್ಣ ಖಗ್ರಾಸ ಕಾಣಿಸಿತು.
