Asianet Suvarna News Asianet Suvarna News

ಕೇರಳ ಸಂತ್ರಸ್ತರಿಗೆ 1.5 ಲಕ್ಷ ರೂ. ನೀಡಿದ 'ಮೀನು ಮಾರಿದ' ಹುಡುಗಿ

ಮೀನು ಮಾರಾಟ ಮಾಡಿ ವಿದ್ಯಾಭ್ಯಾಸ ಮಾಡುತ್ತಿರುವ ಕೇರಳದ  ಕಾಲೇಜು ಹುಡುಗಿ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಳು. ಇದೀಗ ಇದೇ ಹುಡುಗಿ ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದ್ದಾಳೆ. 

Social media sensation Fish selling girl donate 1.5 lakh to kerala Flood relief
Author
Bengaluru, First Published Aug 18, 2018, 5:40 PM IST

ತಿರುವನಂತಪುರಂ(ಆ.18):  ಕೇರಳದ ಹನನ್ ಹಮೀದ್ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಳು. ತೃತೀಯ ವರ್ಷದ ಬಿಎಸ್ ಸಿ ಅಧ್ಯಯನ ಜೊತೆಗೆ ಮೀನು ಮಾರಾಟ ಮಾಡುತ್ತಿದ್ದ ಹನನ್ ಕೇರಳದ ಎಲ್ಲಾ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಭಾರಿ ಜನಪ್ರಿಯವಾಗಿದ್ದರು. ಇದೀಗ ಹನನ್ ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದ್ದು, 1.5 ಲಕ್ಷ ರೂ. ದೇಣಿಗೆ ನೀಡಿದ್ದಾಳೆ.

ಮೀನು ಮಾರಾಟ ಮಾಡಿ ತನ್ನ ವಿದ್ಯಾಭ್ಯಾಸ ಪೂರೈಸುತ್ತಿದ್ದ ಹನನ್ ಹಮೀದ್ ಇದೀಗ ಕೇರಳಾ ಸಂತ್ರಸ್ತರಿಗೆ 1.5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.  ಮಾಧ್ಯಮಗಳಲ್ಲಿ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹನನ್ ಪಯಣ ಬಿತ್ತರವಾಗುತ್ತಿದ್ದಂತೆ ಹಲವು ಆಕೆಯ ವಿದ್ಯಭ್ಯಾಸಕ್ಕೆ ಧನ ಸಹಾಯ ಮಾಡಿದ್ದರು. ಇದೀಗ ಈ ಹಣವನ್ನ ಕೇರಳ ಸಂತ್ರಸ್ತರಿಗೆ ನೀಡಿರುವುದಾಗಿ ಹನನ್ ಹೇಳಿದ್ದಾರೆ.

ಮಾಧ್ಯಮದಲ್ಲಿ ನನ್ನ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಜನರು ನೆರವಿಗೆ ಧಾವಿಸಿದ್ದಾರೆ. ಈ ಹಣ ಇದೀಗ ಸಂತ್ರಸ್ತರ ನೆರವಿಗೆ ಅವಶ್ಯಕ ಎಂದು ಹನನ್ ಹೇಳಿದ್ದಾರೆ. ಭಾರಿ ಮಳೆಯಿಂದಾಗಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಜೊತೆಗೆ ಬ್ಯಾಂಕ್‌ಗಳು ಮುಚ್ಚಲಾಗಿದೆ. ಹೀಗಾಗಿ ಮುಖ್ಯಮಂತ್ರಿಯನ್ನ ಭೇಟಿಯಾಗಿ ಚೆಕ್ ನೀಡುವುದಾಗಿ ಹನನ್ ಸ್ಪಷ್ಟಪಡಿಸಿದ್ದಾಳೆ.

ಇದನ್ನೂ ಓದಿ: ಮೀನು ಮಾರುತ್ತಿದ್ದ ಹುಡುಗಿ ಸೋಷಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದೇಕೆ..?

Follow Us:
Download App:
  • android
  • ios