ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಮೋದಿ ಅವರ ಕುರಿತು ಮಾಡುತ್ತಿರುವ ಟ್ವೀಟ್ ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ತಕ್ಕ ಉತ್ತರಗಳು ಬರುತ್ತಿದ್ದವು. ಈ ಸಾರಿ ರಮ್ಯಾ ಮೋದಿ ಅವರಿಗೆ ನಾಚಿಕೆಯಾಗಬೇಕು ಎಂದು ಬರೆದುಕೊಂಡಿದ್ದು ಮತ್ತೆ ಅವರ ಅವರ ಕಾಲಿಗೆ ಸುತ್ತಿಕೊಂಡಿದೆ.

ಬೆಂಗಳೂರು[ಮಾ. 05] ರಾಹುಲ್ ಗಾಂಧಿ ಅವರ ಮೇಲೆ ವಾಗ್ದಾಳಿ ಮಾಡುತ್ತ ಚುನಾವಣಾ ಪ್ರಚಾರದ ವೇಳೆ ಮೋದಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಉಲ್ಲೇಖ ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಬರೆದುಕೊಂಡಿದ್ದರು.

ಕರುಣೆ ಎನ್ನುವುದನ್ನು ರಾಜೀವ್ ಗಾಂಧಿಯವರಿಂದ ಕಲಿಯಬೇಕು ಎಂದ ರಮ್ಯಾಗೆ ನೆಟ್ಟಿಗರು ಮತ್ತೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'ನಾನು ಎಂಟು ವರ್ಷವಳಾಗಿದ್ದಾಗ ಬಸ್ ನಲ್ಲಿ ಪ್ರಯಾಣಿಸುತ್ತಿದ್ದೆ, ಆಗ ರಾಜೀವ್ ಗಾಂಧಿ ನಿಧನರಾದ ಸುದ್ದಿಬಂತು. ಆಗ ಜನರು ಬಹಳಷ್ಟು ಕಣ್ಣೀರಿಟ್ಟಿದ್ದರು. ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ರಾಜೀವ್ ಗಾಂಧಿ ಸಾವಿನ ಬಗ್ಗೆ ಕಣ್ಣೀರಾಗಿದ್ದರು ಎಂದು ರಮ್ಯಾ ಸರಣಿ ಟ್ವೀಟ್ ಮಾಡಿದ್ದರು.

ಇದಕ್ಕೆ ಕ್ಲಾಸ್ ತೆಗೆದುಕೊಂಡಿರುವ ನಾಗರಿಕರು, ಮೊದಲು ನೀವು ಮತದಾನ ಮಾಡುವುದನ್ನು ಕಲಿಯಿರಿ, ಮೋದಿ ಅವರಿಂದ ನೀವು ಕಲಿತುಕೊಳ್ಳಿ, ಯಾವ ಪಕ್ಷದವರು ಯಾವ ಹೇಳಿಕೆ ನೀಡಿದ್ದಾರೆ? ನಿಮಗೆ ಗೊತ್ತಿಲ್ಲವೇ ಎಂದು ಕಾಲೆಳೆದಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…