ಕಾವೇರಿ ವಿವಾದದಲ್ಲಿ ಬಿಜೆಪಿ ದ್ವಂದ್ವ ನಿಲುವಿಗೆ ಟ್ವಿಟ್ಟರ್ ಮತ್ತು ಫೇಸ್ಬುಕ್`ನಲ್ಲಿ ಖಂಡನೆ

ಬೆಂಗಳೂರು(ಸೆ.22):  ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕಿದ್ದ ಸಂದರ್ಭ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಮುಖಂಡರು ಸರ್ವ ಪಕ್ಷ ಸಭೆಯಿಂದ ಹೊರಗುಳಿದ ಬಗ್ಗೆ ರಾಜ್ಯದ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿರುವ ಜನರು ಪ್ರಧಾನಿ ನರೇಂದ್ರಮೋದಿ ಮತ್ತು ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ಕಿಡಿ ಕಾರಿದ್ದಾರೆ.

 ‘ಮೋದಿ ಮೋಸ’ ಹೆಸರಿನಲ್ಲಿ ಸಾಮಾಜಿಕ ತಾಣಗಳಲ್ಲಿ ಹ್ಯಾಶ್ ಟ್ಯಾಗ್ ಕ್ರಿಯೇಟ್ ಮಾಡಲಾಗಿದ್ದು, ಟೀಕಾಪ್ರಹಾರಗೈದಿದ್ದಾರೆ.

ಕಾವೇರಿ ವಿವಾದದಲ್ಲಿ ಬಿಜೆಪಿ ದ್ವಂದ್ವ ನಿಲುವಿಗೆ ಟ್ವಿಟ್ಟರ್ ಮತ್ತು ಫೇಸ್ಬುಕ್`ನಲ್ಲಿ ಖಂಡನೆ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಮಧ್ಯಸ್ಥಿಕೆ ಬೇಕಿಲ್ಲ ಎಂಬ ಹೇಳಿಕೆಗೆ ಜನತೆಗೆ ಕೆಂಡವಾಗಿದ್ದಾರೆ.

 ‘6 ಕೋಟಿ ಕನ್ನಡಿಗರ ಸಮಸ್ಯೆಗೆ ದನಿಯಾಗದ ಮೋದಿ’

‘18 ಸಂಸದರನ್ನು ಆಯ್ಕೆ ಮಾಡಿದ್ದು ಮೋದಿಯಲ್ಲ, ಕರ್ನಾಟಕ’

‘ಬಿಜೆಪಿ ನಾಲಾಯಕ್​ ಸಂಸದರು ಈಗಲಾದ್ರೂ ಬಾಯಿಬಿಡ್ರಿ’

‘ಬಲೂಚಿಸ್ತಾನದ ಬಗ್ಗೆ ಮಾತನಾಡುವ ನೀವು, ಕಾವೇರಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ’

ಎಂದೆಲ್ಲ ಮೋದಿ ಮತ್ತು ಬಿಜೆಪಿ ನಾಯಕರನ್ನ ಯುವ ಸಮೂಹ ಹಿಗ್ಗಾಮುಗ್ಗಾ ಝಾಡಿಸುತ್ತಿದೆ.