Asianet Suvarna News Asianet Suvarna News

ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹನಾ ಫಾತಿಮಾಗೆ ಬಿಗ್ ರಿಲೀಫ್

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನ ಫಾತಿಮಾಗೆ ಕೇರಳ ಹೈ ಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 

Social Activist Rehana Fathima Granted Bail By Kerala High Court
Author
Bengaluru, First Published Dec 15, 2018, 12:44 PM IST

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿ ಸುದ್ದಿ ಮಾಡಿದ್ದ ಕೇರಳದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ಕೇರಳ ಹೈ ಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.  

ನ್ಯಾ. ಸುನಿನ್ ಥಾಮಸ್ ನೇತೃತ್ವದ ನ್ಯಾಯಪೀಠ ರೆಹನಾ ಫಾತಿಮಾಗೆ  50 ಸಾವಿರ ಬಾಂಡ್ ನೊಂದಿಗೆ ಇಬ್ಬರು ವ್ಯಕ್ತಿಗಳಿಂದ ಸಹಿ ಮಾಡಿಸಿಕೊಂಡು ಷರತ್ತು ಬದ್ಧಜಾಮೀನು ನೀಡಿದೆ.

ಅಲ್ಲದೇ ಪಂಬಾ ಪೊಲೀಸ್ ಠಾಣಾ ವ್ಯಪ್ತಿಗೆ ತೆರಳದಂತೆ ಸೂಚನೆ ನೀಡಿದ್ದು, ಯಾವುದೇ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತಾರದಂತೆ ನಿರ್ದೇಶನ ನೀಡಲಾಗಿದೆ. 

ನವೆಂಬರ್ 27 ರಂದು ಪೊಲೀಸರು ರೆಹನಾ ಫಾತಿಮಾಳನ್ನು ಬಂಧಿಸಿದ್ದರು.   ತನ್ನ ಫೇಸ್ ಬುಕ್ ಪುಟಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಫಾತಿಮಾ ಬಂಧಿಸಲಾಗಿತ್ತು.  32 ವರ್ಷದ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದ ಫಾತಿಮಾಳನ್ನು ಈ ಹಿನ್ನೆಲೆಯಲ್ಲಿ  ಬಿಎಸ್‌ಎನ್‌ಎಲ್ ಸಂಸ್ಥೆ ಹುದ್ದೆಯಿಂದಲೂ ಅಮಾನತು ಮಾಡಿತ್ತು. 

ಫೇಸ್‌ಬುಕ್‌ನಲ್ಲಿ ಫಾತಿಮಾ ಅಯ್ಯಪ್ಪನ ಭಕ್ತೆಯೆಂದು ಹೇಳಿಕೊಂಡು ಅಶ್ಲೀಲ ಭಂಗಿಗಳಲ್ಲಿ ಭಾವಚಿತ್ರಗಳನ್ನು ಹಾಕಿಕೊಂಡಿದ್ದಳು ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ  ಧಕ್ಕೆ ತರುವ ರೀತಿ ನಡೆದು ಕೊಂಡಿದ್ದಳು ಎಂದು ರಾಧಾಕೃಷ್ಣ ಮೆನನ್ ಎಂಬುವವರು ದೂರು ಸಲ್ಲಿಸಿದ್ದರು.

ಈ ದೂರನ್ನು ಆಧರಿಸಿ ಭಾರತೀಯ  ದಂಡ ಸಂಹಿತೆ 295 ಎ ಪ್ರಕಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣವನ್ನು ಆಕೆಯ ಮೇಲೆ ದಾಖಲಿಸಲಾಗಿತ್ತು. 

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾ ಇನ್ನೊಂದು ರೂಪವಿದು ಶಬರಿಮಲೆ ಪ್ರವೇಶಕ್ಕೆ ತೆರಳಿದ್ದ ಹಾಟ್ ಹಾಟ್ ಬೆಡಗಿ ಫೋಟೋ
Follow Us:
Download App:
  • android
  • ios