ಸಹಾರಾ ಮರುಭೂಮಿಯಲ್ಲಿ ಹಿಮಪಾತ

Snowfall in Sahara Desert
Highlights

ವಿಶ್ವದಲ್ಲೇ ಅತ್ಯಧಿಕ ತಾಪಮಾನ ಹೊಂದಿರುವ ದಕ್ಷಿಣ ಆಫ್ರಿಕಾದ ಸಹಾರಾ ಮರುಭೂಮಿಯಲ್ಲಿ, ಕಳೆದ 40 ವರ್ಷಗಳಲ್ಲಿ 3 ನೇ ಬಾರಿ ಹಿಮಪಾತವಾಗಿದೆ.

ಐನ್‌ಸೆಫ್ರಾ (ಅಲ್ಜೀರಿಯಾ) (ಜ.10): ವಿಶ್ವದಲ್ಲೇ ಅತ್ಯಧಿಕ ತಾಪಮಾನ ಹೊಂದಿರುವ ದಕ್ಷಿಣ ಆಫ್ರಿಕಾದ ಸಹಾರಾ ಮರುಭೂಮಿಯಲ್ಲಿ, ಕಳೆದ 40 ವರ್ಷಗಳಲ್ಲಿ 3 ನೇ ಬಾರಿ ಹಿಮಪಾತವಾಗಿದೆ.

ಮರುಭೂಮಿಯ ಹೆಬ್ಬಾಗಿಲು ಎಂದೇ ಖ್ಯಾತವಾದ ಅಲ್ಜೀರಿಯಾದ ನಗರ ಐನ್‌ಸೆಫ್ರಾದಲ್ಲಿ ಭಾನುವಾರ ಮುಂಜಾನೆ ಹಿಮಪಾತ ಆಗಿದೆ. ಸುಮಾರು 16 ಇಂಚುಗಳಷ್ಟು ದಪ್ಪ ಹಿಮ ಪದರ ಸೃಷ್ಟಿಯಾಗಿತ್ತು.ಆದರೆ ತಾಪಮಾನ ಹೆಚ್ಚುತ್ತಿದ್ದಂತೆ ಹಿಮಕರಗಿ ನೀರಾಯಿತು. ಐನ್‌ಸೆಫ್ರಾದಲ್ಲಿ ತಾಪಮಾನ ಮೈನಸ್ 10.2 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. 1979 ರಲ್ಲಿ ಒಂದು ಬಾರಿ ಹಿಮಪಾತವಾಗಿ, ಒಂದು ಗಂಟೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಆ ನಂತರ ಎರಡು ವರ್ಷಗಳ ಹಿಂದೊಮ್ಮೆ ಮತ್ತು ಕಳೆದ ವರ್ಷವಷ್ಟೇ ಹಿಮಪಾತವಾಗಿತ್ತು. ಬೇಸಿಗೆಯಲ್ಲಿ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಸಹಾರಾದಲ್ಲಿ, ಚಳಿಗಾಲದಲ್ಲಿ ಕನಿಷ್ಠ -10.2  ಡಿಗ್ರಿ ಸೆ. ತಾಪಮಾನ ದಾಖಲಾಗುತ್ತದೆ.

 

loader