ದೇಶದ ಅತಿದೊಡ್ಡ ಇ-ಕಾಮರ್ಸ್‌ ವಿಲೀನಕ್ಕೆ ಐಟಿ ದಿಗ್ಗಜ ಅಜೀಂ ಪ್ರೇಮ್‌ಜಿ ತೆಗೆದಿರುವ ಆಕ್ಷೇಪಗಳು ಅಡ್ಡಿಯಾಗಿವೆ. ಅಜೀಂ ಪ್ರೇಮ್‌ಜಿ ಅವರು ಸ್ನಾಪ್ ಡೀಲ್'ನ ಸಣ್ಣ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಅವರು ಈ ಕಂಪನಿಯ ಸ್ಥಾಪಕರು ಹಾಗೂ ಎರಡು ದೊಡ್ಡ ಷೇರುದಾರ ಕಂಪನಿಗಳಿಗೆ ವಿಲೀನದಿಂದ ಬರುವ ಆದಾಯದಲ್ಲಿ ಭಾರಿ ಪ್ರಮಾಣದ ವಿಶೇಷ ಮೊತ್ತವನ್ನು ನೀಡುತ್ತಿರುವುದಕ್ಕೆ ಆಕ್ಷೇಪ ತೆಗೆದಿದ್ದಾರೆ ಎಂದು ಮೂಲಗಳು ಹೇಳಿವೆ.

ನವದೆಹಲಿ: ದೇಶದ ಅತಿದೊಡ್ಡ ಇ-ಕಾಮರ್ಸ್‌ ವಿಲೀನಕ್ಕೆ ಐಟಿ ದಿಗ್ಗಜ ಅಜೀಂ ಪ್ರೇಮ್‌ಜಿ ತೆಗೆದಿರುವ ಆಕ್ಷೇಪಗಳು ಅಡ್ಡಿಯಾಗಿವೆ. ಅಜೀಂ ಪ್ರೇಮ್‌ಜಿ ಅವರು ಸ್ನಾಪ್ ಡೀಲ್'ನ ಸಣ್ಣ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಅವರು ಈ ಕಂಪನಿಯ ಸ್ಥಾಪಕರು ಹಾಗೂ ಎರಡು ದೊಡ್ಡ ಷೇರುದಾರ ಕಂಪನಿಗಳಿಗೆ ವಿಲೀನದಿಂದ ಬರುವ ಆದಾಯದಲ್ಲಿ ಭಾರಿ ಪ್ರಮಾಣದ ವಿಶೇಷ ಮೊತ್ತವನ್ನು ನೀಡುತ್ತಿರುವುದಕ್ಕೆ ಆಕ್ಷೇಪ ತೆಗೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಹೀಗಾಗಿ 100 ಶತಕೋಟಿ ಡಾಲರ್‌ ಮೌಲ್ಯದ ವಿಲೀನ ನನೆಗುದಿಗೆ ಬಿದ್ದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಕಾಲಾರಿ ಕ್ಯಾಪಿಟಲ್‌ ಹಾಗೂ ನೆಕ್ಸಸ್‌ ವೆಂಚರ್‌ ಪಾರ್ಟನ​ರ್‍ಸ್ ಎಂಬ ಕಂಪನಿಗಳಿಗೆ 60 ದಶಲಕ್ಷ ಡಾಲರ್‌ ಹಾಗೂ ಸ್ನಾಪ್ ಡೀಲ್ ಸ್ಥಾಪಕರಾದ ಕುನಾಲ್‌ ಬಹ್ಲ್ ಹಾಗೂ ರೋಹಿತ್‌ ಬನ್ಸಲ್‌ ಅವರಿಗೆ 30 ದಶಲಕ್ಷ ಡಾಲರ್‌ ಹಣ ವಿಲೀನದಿಂದ ಲಭ್ಯವಾಗುತ್ತಿದೆ. ಅವರಿಗಷ್ಟೇ ಏಕೆ ಹೆಚ್ಚು ಮೊತ್ತ? ಉಳಿದವರಿಗೇಕೆ ಕಮ್ಮಿ ಎಂಬುದು ಪ್ರೇಮ್‌ಜಿ ವಾದವಾಗಿದೆ.