ಹಾವು ಗಿಡುಗನ ಹೋರಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್| ಜೀವನ್ಮರಣ ಹೋರಾಟದಲ್ಲಿ ಗೆದ್ದವರಾರು?| ಕ್ಲೈಮ್ಯಾಕ್ಸ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು!
ಟೆಕ್ಸಾಸ್[ಮಾ.30]: ಟೆಕ್ಸಾಸ್ ನ ಶಾಲೆಯೊಂದರ ಮುಂಭಾಗದಲ್ಲಿ ನಡೆದ ಘಟನೆಯೊಂದು ಕಂಡು ಬಹುತೇಕರು ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನ ನಾರ್ಥ್ ವೆಸ್ಟ್ ಇಂಡಿಪೆಂಡೆಂಟ್ ಸ್ಕೂಲ್ ಮುಂಭಾಗವು ಹಾವು ಹಾಗೂ ಗಿಡುಗನ ಕಾಳಗಕ್ಕೆ ಸಾಕ್ಷಿಯಾಗಿದೆ. Texas Parks and Wildlife-DFW Urban Wildlife ಫೇಸ್ ಬುಕ್ ಪೇಜ್ ನಲ್ಲಿ ಈ ಜೀವನ್ಮರಣ ಹೋರಾಟದ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವು ಭಾರೀ ವೈರಲ್ ಆಗುತ್ತಿವೆ. ಅಷ್ಟಕ್ಕೂ ಈ ಯುದ್ಧದಲ್ಲಿ ಕೊನೆಗೂ ಗೆದ್ದವರಾರು?
ಹಾವು ಹಾಗೂ ಗಿಡುಗನ ನಡುವಿನ ಈ ಜೀವನ್ಮರಣ ಕಾಳಗದಲ್ಲಿ ಯಾರೊಬ್ಬರೂ ಗೆದ್ದಿಲ್ಲ, ಯಾರೂ ಸೋತಿಲ್ಲ. ಹೌದು ಎರಡೂ ಜೀವಿಗಳು ತಮ್ಮ ಪ್ರಾಣ ಕಾಪಾಡಿಕೊಳ್ಳಲು ಯಶಸ್ವಿಯಾಗಿವೆ. ಫೇಸ್ ಬುಕ್ ನಲ್ಲಿ ನೀಡಲಾಗಿರುವ ಮಾಹಿತಿ ಅನ್ವಯ ಶಾಲೆಯಲ್ಲಿದ್ದ ಮಕ್ಕಳೆಲ್ಲಾ ಈ ಕಾಳಗದಲ್ಲಿ ಹಾವು ಹಾಗೂ ಗಿಡುಗ ಇವೆರಡೂ ಸತ್ತು ಹೋಗಿವೆ ಎಂದು ಭಾವಿಸಿದ್ದರು. ಆದರೆ ಹತ್ತಿರ ಹೋಗಿ ಪರಿಶೀಲಿಸಿದಾಗ ಇವೆರರಡೂ ಜೀವಂತವಾಗಿವೆ ಎಂದು ತಿಳಿದು ಬಂದಿದೆ. ಕೆಲ ಸಮಯದ ಬಳಿಕ ಎರಡೂ ಒಬ್ಬರನ್ನೊಬ್ಬರು ಬಿಟ್ಟಿವೆ, ಅತ್ತ ಗಿಡುಗ ಹಾರಿ ಹೋದರೆ ಇತ್ತ ಹಾವು ತನ್ನ ದಾರಿ ಹಿಡಿದಿದೆ.
ಈ ಕಾಳಗದ ಫೋಟೋಗಳು ಬಹಳಷ್ಟು ವೈರಲ್ ಆಗುತ್ತಿವೆ. 2 ಸಾವಿರಕ್ಕೂ ಅಧಿಕಮಂದು ಶೇರ್ ಮಾಡಿಕೊಂಡಿದ್ದು, 5ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಈ ಹೋರಾಟದಲ್ಲಿ ಗಿಡುಗ ಗೆದ್ದಿಲ್ಲ ಎಂದು ಹಲವಾರು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 30, 2019, 1:35 PM IST