ತಪಾಸಣೆ ವೇಳೆ ಎರಡು ತಲೆ ಹಾವು ಪತ್ತೆ

First Published 6, May 2018, 11:15 AM IST
Snake Found in Togarsi Check Post
Highlights

ಚುನಾವಣಾ ತನಿಖಾ ಠಾಣೆಯ ಬಳಿ ತಪಾಸಣೆ ವೇಳೆ ಬಸ್ಸಿನಲ್ಲಿ ಎರಡು ತಲೆಯ ಹಾವು ಪತ್ತೆಯಾಗಿರುವ ಘಟನೆ ಶಿಕಾರಿಪುರ ತಾಲೂಕಿನ ತೊಗರ್ಸಿಯ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.  ಕೆಎಸ್’ಆರ್’ಟಿಸಿ ಬಸ್’ನಲ್ಲಿ ಪ್ರಯಾಣಿಸುತ್ತಿದ್ದ  ಇಬ್ಬರು ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಿದಾಗ  ಎರಡು ತಲೆಯ ಬೃಹದಾಕಾರದ ಹಾವು ಪತ್ತೆಯಾಗಿದೆ.

ಶಿವಮೊಗ್ಗ (ಮೇ. 06): ಚುನಾವಣಾ ತನಿಖಾ ಠಾಣೆಯ ಬಳಿ ತಪಾಸಣೆ ವೇಳೆ ಬಸ್ಸಿನಲ್ಲಿ ಎರಡು ತಲೆಯ ಹಾವು ಪತ್ತೆಯಾಗಿರುವ ಘಟನೆ ಶಿಕಾರಿಪುರ ತಾಲೂಕಿನ ತೊಗರ್ಸಿಯ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. 

ಕೆಎಸ್’ಆರ್’ಟಿಸಿ ಬಸ್’ನಲ್ಲಿ ಪ್ರಯಾಣಿಸುತ್ತಿದ್ದ  ಇಬ್ಬರು  ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಿದಾಗ  ಎರಡು ತಲೆಯ ಬೃಹದಾಕಾರದ ಹಾವು ಪತ್ತೆಯಾಗಿದೆ.  ಬೆಲೆಬಾಳುವ ಹಾವನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು. ಬೆಂಗಳೂರು ಮತ್ತಿಕೆರೆಯ ಮಂಜುನಾಥ , ಅನೆಕಲ್ಲಿನ ಉಮಾಪತಿಯನ್ನು  ಬಂಧಿಸಲಾಗಿದೆ.  ಹಾವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. 

loader