ಕಚ್ಚಿದ ಹಾವಿಗೆ ತಿರುಗಿ ಕಚ್ಚಿಸಿ ಸಾಯಿಸಿದ ವ್ಯಕ್ತಿ ತಾನೂ ಸಾವಿಗೀಡಾಗಿದ್ದಾನೆ.

ಗಾಂಧಿನಗರ [ಜು.17] : ಇಲ್ಲಿನ ಮಹಿಶ್ ಗರ್ ಪ್ರದೇಶದಲ್ಲಿ ವ್ಯಕ್ತಿಯೋರ್ವ ಹಾವು ಕಡಿತದಿಂದ ಸಾವಿಗಾಡಿದ್ದು, ಸಾಯುವ ಮುನ್ನ ಹಾವನ್ನೂ ಕಡಿದು ಸಾಯಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಮಧ್ಯಾಹ್ನದ ವೇಳೆ ವಡೋದರದಿಂದ 120 ಕಿ.ಮೀ ದೂರದಲ್ಲಿರುವ ಅಜನ್ವಾಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.

ಪರ್ವತ್ ಗಾಲಾ ಬರಿಯಾ ಹೊಲದಲ್ಲಿ ನಿಂತಿದ್ದ ವೇಳೆ ಸ್ಥಳದಲ್ಲಿಯೇ ಇದ್ದ ಹಾವೊಂದು ಕಡಿದಿದೆ. ಬಳಿಕ ಅದನ್ನು ಹಿಡಿದು ತಿರುಗಿ ಕಡಿದು ಸಾಯಿಸಿದ್ದಾನೆ. 

ಈ ವೇಳೆ ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಒಂದು ದಿನದ ಬಳಿಕ ಮೃತಪಟ್ಟಿದ್ದಾನೆ. ಈ ಸಂಬಂಧ ಅಜನ್ವಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.