ಛತ್ತೀಸ್‌ಗಢ[ಆ.19]: ಹಾವು ಕಡಿತಕ್ಕೊಳಗಾಗಿದ್ದ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನನ್ನು ಬರೋಬ್ಬರಿ 2.5 ಕಿ.ಮಿ ಹೊತ್ತುಕೊಂಡೇ ಸಾಗುವ ಮೂಲಕ ಯೋಧರು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಛತ್ತೀಸ್‌ಗಢದ ಪುಸ್‌ಕುಂತಾ ಎಂಬಲ್ಲಿ ಹಾವು ಕಡಿದು ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯೊಬ್ಬನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್‌ ಕರೆಸಲಾಗಿತ್ತು. ಅತಿಯಾದ ಮಳೆಯಿಂದಾಗಿ ರಸ್ತೆ ಹಾಳಾಗಿದ್ದರಿಂದ ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್‌ ಬರಲು ಸಾಧ್ಯವಾಗದೇ ಹೋದಾಗ ಸಿಆರ್‌ಪಿಎಫ್‌ ಯೋಧರು ಗಾಯಾಳುವನ್ನು ಕುರ್ಚಿ ಮೇಲೆ ಕೂರಿಸಿ, ಅದನ್ನು 2 ಮರದ ತುಂಡುಗಳಿಗೆ ಕಟ್ಟಿ, ಅದನ್ನು ಸುಮಾರು 2.5 ಕಿ.ಮೀ ಹೊತ್ತುಕೊಂಡು ಆ್ಯಂಬುಲೆನ್ಸ್‌ ಇರುವಲ್ಲಿಗೆ ತಲುಪಿಸಿದ್ದಾರೆ.

ರಾಯ್‌ಗಢ, ಪುಸ್‌ಕುಂಟಾ ಹಾಗೂ ಬಾಹೇಗುಡದಲ್ಲಿ ಯೋಧರು ಗಸ್ತು ತಿರುಗುತ್ತೊರುವ ವೇಳೆ ಈ ಘಟನೆ ನಡೆದಿದೆ.