ಅಮೇಥಿ (ಉತ್ತರ ಪ್ರದೇಶ] [ನ.06]: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಮತದಾರರನ್ನು ತನ್ನತ್ತ ಸೆಳೆಯಲು ನಾನಾ ಪ್ಲ್ಯಾನ್ ಗಳನ್ನ ಮಾಡಿದೆ. 

ಇದಕ್ಕೆ ಪೂರಕವೆಂಬಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಕ್ಷೇತ್ರವಾಗಿರೋ ಅಮೇಥಿಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಂದಾಗಿದ್ದಾರೆ. 

ದೀಪಾವಳಿ ಉಡುಗೋರೆಯಾಗಿ ಅಮೇಥಿ ಕ್ಷೇತ್ರದಲ್ಲಿ 10,000 ಸಾವಿರ ಸೀರೆಗಳನ್ನು ನೀಡಿದ್ದಾರೆ. ಸೀರೆಗಳನ್ನು ಬಿಜೆಪಿ ಅಮೇಥಿ ಜಿಲ್ಲೆಯ ಮಹಿಳಾ ಕಾರ್ಯಕರ್ತರು ಪಡೆದುಕೊಂಡಿದ್ದು, ದೀಪಾವಳಿ ಉಡುಗೊರೆಯಾಗಿ ಹಂಚಲು ತೀರ್ಮಾನಿಸಿದ್ದಾರೆ. 

ಈ ಭಾರಿ ರಾಹುಲ್ ಗಾಂಧಿಯನ್ನು ಸೋಲಿಸಲೇಕು ಎಂದು ಪಣ ತೊಟ್ಟಿರುವ ಬಿಜೆಪಿ, ಅಮೇಥಿ ಮತದಾರರ ನಿರಂತರ ಸಂಪರ್ಕದಲ್ಲಿದ್ದಾರೆ. ಸೀರೆ ಹಂಚಿಕೆ ವಿಚಾರವನ್ನು ಕೇಂದ್ರ ಸಚಿವರು ಇದು 'ಡಡೀಸ್ ಲವ್' ಇದ್ದ ಹಾಗೆ ಅಂತ ವಿವರಿಸಿದ್ದಾರೆ. 

ಇನ್ನೂ 2019ರ ಲೋಕಸಾಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ಗೆಲುವಿನ ಅಂತರವನ್ನು ಕಡಿಮೆ ಮಾಡಲು ಬಿಜೆಪಿ ಕಾಂಗ್ರೆಸ್ ಪಾಕೆಟ್ ಬ್ಯೂರೊದಿಂದ ಇರಾನಿ ಅವರನ್ನು ಮೈದಾನಕ್ಕೆ ಕರೆತಂದಿದೆ. 2014ರ ಚುನಾವಣೆ ಸಂದರ್ಭದಲ್ಲಿಯೂ ಇರಾನಿ ಸಿರೆಗಳನ್ನು ಕಳುಹಿಸಿಕೊಟ್ಟಿದ್ದರು.