ಬಾಯಿ ಕಟ್ಟಿ, ಕೈಗಳನ್ನು ಕಟ್ಟಿ ಕಣ್ಣು ಅರ್ಧ ಮುಚ್ಚಿದ ತಮ್ಮದೇ ಫೊಟೊವನ್ನು ಸ್ಮೃತಿ ಇರಾನಿ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ..?

ನವದೆಹಲಿ : ಮಹಿಳೆಯೋರ್ವರನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆ ಕಟ್ಟಿ ಕಣ್ಣನ್ನು ಅರ್ಧ ಮುಚ್ಚಿದ ಫೊಟೊ ಒಂದು ಇಲ್ಲಿದೆ. ಇದು ಕೇಂದ್ರ ಸಚಿವೆ ಸ್ಮೃತಿ ಇರಾನಿ. 

ಅವರಿಗೇಕೆ ಇಂತಹ ಸ್ಥಿತಿ ಎಂದು ಯೋಚ್ನೆ ಮಾಡ್ತಿದರೆ ಅದಕ್ಕುತ್ತರ ಅವರು ಈ ಹಿಂದೆ ನಟಿಸಿದ ಕ್ಯೂಂಕಿ ಸಾಸ್ ಬಿ ಕಭಿ ಬಹುತಿ ಧಾರಾವಾಹಿಯ ದೃಶ್ಯವಾಗಿದೆ. 

ಕಳೆದ ಎರಡು ದಿನಗಳ ಹಿಂದಷ್ಟೇ ಶಬರಿಮಲೆ ವಿಚಾರವಾಗಿ ಪ್ರತಿಕ್ರಿಯಿಸಿ ರಕ್ತದ ಪ್ಯಾಡ್ ನೊಂದಿಗೆ ನಿಮ್ಮ ಗೆಳತಿಯರ ಮನೆಗೆ ಹೋಗುತ್ತೀರಾ ಎಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ಹಲವು ರೀತಿಯ ಟೀಕೆಗಳು ವ್ಯಕ್ತವಾಗಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಈ ಪೋಸ್ಟ್ ಹಾಕಿದ್ದಾರೆ.

 ಹಮ್ ಬೊಲೆಗಾ ತೊ ಬೊಲೊಗೆ ಕಿ ಬೋಲ್ತಾ ಹೇ [ಮಾತಾಡಿದ್ರೆ ಮಾತನಾಡುತ್ತಾರೆ ಎನ್ನುತ್ತಾರೆ ] ಎಂದು ಶೀರ್ಷಿಕೆಯೊಂದಿಗೆ ಈ ಫೊಟೊ ಹಾಕಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

View post on Instagram