ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಕೃಷ್ಣ ಸೇರ್ಪಡೆ ತರಾತುರಿಯಲ್ಲಿ ನಡೆಯುತ್ತಿದ್ದು, ಕೃಷ್ಣ ಅಥವಾ ಅವರು ಹೇಳಿದವರಿಗೆ ರಾಜ್ಯಸಭಾ ಟಿಕೆಟ್‌ ಮತ್ತು ಹಳೆ ಮೈಸೂರು ಭಾಗದಲ್ಲಿ ಕೃಷ್ಣ ಬೆಂಬಲಿಗ ಕೆಲವರಿಗೆ ವಿಧಾನಸಭಾ ಟಿಕೆಟ್‌ ಕೊಡಲು ಯಡಿಯೂರಪ್ಪನವರೇ ಎಸ್‌ ಎಂದು ಬಿಟ್ಟಿದ್ದಾರಂತೆ.

ಮಾರ್ಚ್ 15ರಂದು ಪ್ರಧಾನಿ ಮೋದಿ ಮತ್ತು ಅಮಿತ್‌ ಷಾರನ್ನು ಭೇಟಿಯಾಗುತ್ತಿರುವ ಎಸ್‌ ಎಂ ಕೃಷ್ಣ ಸಾಹೇಬರು ಅವತ್ತೇ ಕೇಸರಿ ಬಾವುಟ ಕೈಗೆ ತೆಗೆದುಕೊಳ್ಳಲಿದ್ದು, ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ನಡೆಸಲಿದ್ದಾರೆ ಎನ್ನುವ ಸುದ್ದಿ ಖಚಿತಪಟ್ಟಿದೆ. ಆದರೆ ತೆರೆಯ ಮರೆಯಲ್ಲಿ ಕೃಷ್ಣ ಡಿಮ್ಯಾಂಡ್‌ ಏನು ಎನ್ನುವುದು ಮಾತ್ರ ಭಾರಿ ಚರ್ಚೆಯಾಗುತ್ತಿದೆ. ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಕೃಷ್ಣ ಸೇರ್ಪಡೆ ತರಾತುರಿಯಲ್ಲಿ ನಡೆಯುತ್ತಿದ್ದು, ಕೃಷ್ಣ ಅಥವಾ ಅವರು ಹೇಳಿದವರಿಗೆ ರಾಜ್ಯಸಭಾ ಟಿಕೆಟ್‌ ಮತ್ತು ಹಳೆ ಮೈಸೂರು ಭಾಗದಲ್ಲಿ ಕೃಷ್ಣ ಬೆಂಬಲಿಗ ಕೆಲವರಿಗೆ ವಿಧಾನಸಭಾ ಟಿಕೆಟ್‌ ಕೊಡಲು ಯಡಿಯೂರಪ್ಪನವರೇ ಎಸ್‌ ಎಂದು ಬಿಟ್ಟಿದ್ದಾರಂತೆ. ಆದರೆ 84ರ ಕೃಷ್ಣಗೆ ಉಪರಾಷ್ಟ್ರಪತಿಯಾಗುವ ಆಸೆ ಇರುವುದು ಸುಳ್ಳಲ್ಲವಂತೆ.

 (ಕನ್ನಡ ಪ್ರಭ: ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ )