ರೂ.2 ಕೋಟಿಕ್ಕಿಂತ ಕಡಿಮೆ ವ್ಯವಹಾರ ನಡೆಸುವ ಸಣ್ಣ ವರ್ತಕರು ಡಿಜಿಟಲ್ ವ್ಯವಹಾರಗಳನ್ನು ನಡೆಸಿದರೆ ಅವರು ಶೇ.30ರಷ್ಟು ತೆರಿಗೆಯನ್ನು ಉಳಿಸಬಹುದೆಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ (ಡಿ.20): ನೋಟು ಅಮಾನ್ಯ ಕ್ರಮದ ಬಳಿಕ ಇಲೆಕ್ಟ್ರಾನಿಕ್ ವ್ಯವಹಾರಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ಸಣ್ಣ ವರ್ತಕರಿಗೆ ಸಿಹಿ ಸುದ್ದಿ ನೀಡಿದೆ.

ರೂ.2 ಕೋಟಿಕ್ಕಿಂತ ಕಡಿಮೆ ವ್ಯವಹಾರ ನಡೆಸುವ ಸಣ್ಣ ವರ್ತಕರು ಡಿಜಿಟಲ್ ವ್ಯವಹಾರಗಳನ್ನು ನಡೆಸಿದರೆ ಅವರು ಶೇ.30ರಷ್ಟು ತೆರಿಗೆಯನ್ನು ಉಳಿಸಬಹುದೆಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಹಾಲಿ ಅಸ್ತಿತ್ವದಲ್ಲಿರುವ ಆದಾಯ ತೆರಿ ಕಾಯ್ದೆ-1961 ಪ್ರಕಾರ, ರೂ.2 ಕೋಟಿಕ್ಕಿಂತ ಕಡಿಮೆ ವ್ಯವಹಾರ ನಡೆಸುವ ಸಣ್ಣ ವರ್ತಕರ ಆದಾಯವನ್ನು ವ್ಯವಹಾರದ ಶೇ.8ರಂದು ಪರಿಗಣಿಸಲಾಗುತ್ತಿತ್ತು. ಅಂಥವರು ಡಿಜಿಟಲ್ ವ್ಯವಹಾರ ನಡೆಸಿದರೆ ಇನ್ಮುಂದೆ ಅದನ್ನು ಶೇ.6 ಎಂದು ಪರಿಗಣಿಸಲಾಗುವುದೆಂದೂ, ಆ ಮೂಲಕ ಅವರು ತಮ್ಮ ತೆರಿಗೆಯಲ್ಲಿ ಶೇ.30 ರಷ್ಟು ಉಳಿಸಬಹುದು ಜೇಟ್ಲಿ ಹೇಳಿದ್ದಾರೆ.

ಆದಾಯ ತೆರಿಗೆ ಕಾಯ್ದೆ 44AD ಪ್ರಕಾರ ಪರಿಗಣಿಸಲಾಗುತ್ತಿದ್ದ ಶೇ.8 ಲಾಭಾಂಶ ದರವನ್ನು ಶೇ. 6ಕ್ಕಿಳಿಸುವಂತೆ ಸಿಬಿಡಿಟಿ ನಿನ್ನೆ ನೊಟಿಫಿಕೇಶನ್ ಜಾರಿ ಮಾಡಿತ್ತು.