ವಸತಿ ಪ್ರದೇಶದಲ್ಲಿ ಬಿದ್ದ ಲಘು ವಿಮಾನ: ಐವರ ಸಜೀವ ದಹನ!

Small Plane Crashes Into Mumbai Construction Site, 5 Dead
Highlights

ವಸತಿ ಪ್ರದೇಶದಲ್ಲಿ ಬಿದ್ದ ಲಘು ವಿಮಾನ

ಮುಂಬೈನ ಘಾಟ್ ಕೋಪರ್ ಬಳಿ ದುರ್ಘಟನೆ

ದುರ್ಘಟನೆಯಲ್ಲಿ ಐವರ ಸಜೀವ ದಹನ

ಮುಂಬೈ(ಜೂ.28): ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ಐವರು ಸಜೀವ ದಹನಗೊಂಡಿದ್ದಾರೆ. ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಬಳಿ ವಿಮಾನ ಪತನಗೊಂಡಿದೆ. 

ವಿಮಾನದಲ್ಲಿದ್ದ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಇಂಜಿನಿಯರ್ ಸುರ್ಬಿ ಮತ್ತು ಟೆಕ್ನಿಷನ್ ಮನೀಶ್ ಪಾಂಡೆ ಹಾಗೂ ಓರ್ವ ಸ್ಧಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದಾರೆ. 

ಕಿಂಗ್ ಏರ್ ಸಿ90 ಚಾರ್ಟರ್ಡ್ ವಿಮಾನ ಉತ್ತರಪ್ರದೇಶ ಸರ್ಕಾರದ್ದು ಎಂದು ಈ ಮೊದಲು ಹೇಳಲಾಗಿತ್ತು. ಆದರೆ ವಿಮಾನ ಪತನ ನಂತರ ಇದೀಗ ಉತ್ತರಪ್ರದೇಶ ಸರ್ಕಾರ ಹಿಂದೆಯೇ ಈ ವಿಮಾನವನ್ನು ಮಾರಾಟ ಮಾಡಿತ್ತು ಎಂಬುದು ಗೊತ್ತಾಗಿದೆ.

ವಿಮಾನ ಪತನದಿಂದ ಕಟ್ಟಡಕ್ಕೂ ಬೆಂಕಿ ತಲುಗಿದ್ದು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ.  
 

loader