ಅಟಲ್ ಪಿಂಚಣಿ ಯೋಜನೆ ಇನ್ನು ಈ ಬ್ಯಾಂಕ್’ಗಳಲ್ಲಿಯೂ ಲಭ್ಯ

Small finance Payment Banks Expand Pension scheme outreach
Highlights

ಪೋಸ್ಟ್ ಆಫಿಸ್ ಹಾಗೂ ಎಸ್’ಬಿಐನಲ್ಲಿ ಇದ್ದ ಅಟಲ್ ಪಿಂಚಣಿ ಯೋಜನೆಯನ್ನು ಇದೀಗ 11 ಪೇಮೆಂಟ್ ಬ್ಯಾಂಕ್ ಹಾಗೂ 10 ಸಣ್ಣ ಫೈನಾನ್ಸ್ ಬ್ಯಾಂಕ್’ಗಳಿಗೆ ಆರ್’ಬಿಐ ವಿಸ್ತರಿಸಿದೆ.

ನವದೆಹಲಿ : ಪೋಸ್ಟ್ ಆಫಿಸ್ ಹಾಗೂ ಎಸ್’ಬಿಐನಲ್ಲಿ ಇದ್ದ ಅಟಲ್ ಪಿಂಚಣಿ ಯೋಜನೆಯನ್ನು ಇದೀಗ 11 ಪೇಮೆಂಟ್ ಬ್ಯಾಂಕ್ ಹಾಗೂ 10 ಸಣ್ಣ ಫೈನಾನ್ಸ್ ಬ್ಯಾಂಕ್’ಗಳಿಗೆ ಆರ್’ಬಿಐ ವಿಸ್ತರಿಸಿದೆ.

 ಇನ್ನು ಮುಂದೆ ಈ ಬ್ಯಾಂಕ್’ಗಳಲ್ಲಿಯೂ ಕೂಡ ಪಿಂಚಣಿ ಯೋಜನೆಯನ್ನು ಆರಂಭ ಮಾಡಲಾಗುತ್ತದೆ. ಇದರಿಂದ ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಕೇವಲ ಪೋಸ್ಟಾಫಿಸ್, ಎಸ್’ಬಿಐಗೆ ಹೋಗಬೇಕು ಎನ್ನುವ ತೊಂದರೆ ದೂರಾಗಲಿದೆ.

ಅಲ್ಲದೇ ಇದರಿಂದ ಸಣ್ಣ ಬ್ಯಾಂಕಿಂಗ್ ವ್ಯವಸ್ಥೆಗಳ ಬಲವರ್ಧನೆಯೂ ಕೂಡ ಆಗಲಿದ್ದು, ಈ ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ.  ಇದರಿಂದ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಹೆಚ್ಚಿನ ಪ್ರಮಾಣದ ಆದಾಯವೂ ಕೂಡ ದೊರೆಯಲಿದೆ.

loader