Asianet Suvarna News Asianet Suvarna News

'ಪನಾಮಾ ಪೇಪರ್ಸ್‌ ಹಗರಣದಲ್ಲಿ ಎಸ್.ಎಂ. ಕೃಷ್ಣ ಅಳಿಯ ಭಾಗಿ'

ಪನಾಮಾ ಪೇಪರ್ಸ್‌ ಹಗರಣ ಇಡೀ ಜಗತ್ತನ್ನೇ ನಡುಗಿಸಿದ ಪ್ರಕರಣ. ಈ ಹಗರಣದಲ್ಲಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್‌ ಷರೀಫ್‌ ಜೈಲು ಸೇರಬೇಕಾಗಿ ಬಂತು. ಇಂತಹ ಪ್ರಕರಣದಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಳಿಯ ಉಮೇಶ್ ಹಿಂಗೂರಾಣಿ ಮತ್ತು ಮಗಳು ಶಾಂಭವಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

SM Krishna Son In Law involved in Panama Papers-SR Hiremath
Author
Hubballi, First Published Sep 14, 2018, 4:13 PM IST

ಹುಬ್ಬಳ್ಳಿ: (ಸೆ.14):  ಪನಾಮಾ ಪೇಪರ್ಸ್‌ ಹಗರಣ ಇಡೀ ಜಗತ್ತನ್ನೇ ನಡುಗಿಸಿದ ಪ್ರಕರಣ. ಈ ಹಗರಣದಲ್ಲಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್‌ ಷರೀಫ್‌ ಜೈಲು ಸೇರಬೇಕಾಗಿ ಬಂತು. ಇಂತಹ ಪ್ರಕರಣದಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಳಿಯ ಮತ್ತು ಅಳಿಯನ ಮಗಳು ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು (ಶುಕ್ರವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದಾಗ ಅಳಿಯ ಉಮೇಶ್ ಹಿಂಗೂರಾಣಿ ಮತ್ತು ಮಗಳು ಶಾಂಭವಿ ಪ್ರಭಾವ ಬಳಸಿ ಹಲವಾರು ಕಂಪೆನಿಗಳನ್ನು ತೆರೆದಿದ್ದಾರೆ. ಆ ಕಂಪೆನಿಗಳನ್ನ ತೆರೆಯಲು ಹಣ ಎಲ್ಲಿಂದ ಬಂತು ಎಂದು ಯಾರಿಗೂ ಗೊತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಬೆಂಗಳೂರು ಸೇರಿದಂತೆ, ಲಂಡನ್‌ನಲ್ಲೂ ಕಂಪೆನಿಗಳನ್ನು ತೆರೆದಿರುವ ಇವರಿಗೆ ಹಣದ ಮೂಲ ಯಾವುದು ಎಂದು ಎಲ್ಲೂ ಬಹಿರಂಗಪಡಿಸಿಲ್ಲ. ಅಲ್ಲದೆ, ವಿದೇಶದಲ್ಲಿ ಮಾಡಿರುವ ನೂರಾರು ಕೋಟಿ ಹಣದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಈ ಹಗರಣದ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದರು.

Follow Us:
Download App:
  • android
  • ios