ಎಸ್. ಎಂ ಕೃಷ್ಣ ರಾಜಿನಾಮೆ ಬಳಿಕ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ ಶುರುವಾಗಿದೆ. ಕಾಂಗ್ರೆಸ್'ಗೆ ಗುಡ್ ಬೈ ಹೇಳಿದ ಕೃಷ್ಣ ಈಗ ಬಿಜೆಪಿ ಕಡೆ ಮುಖ ಮಾಡುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಷ್ಟಕ್ಕೂ ಇಂತಹ ಅನುಮಾನ ಮೂಡಲು ಕಾರಣವಾದ ಅಂಶ ಹೀಗಿದೆ.

ಬೆಂಗಳೂರು(ಜ.30): ಎಸ್. ಎಂ ಕೃಷ್ಣ ರಾಜಿನಾಮೆ ಬಳಿಕ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ ಶುರುವಾಗಿದೆ. ಕಾಂಗ್ರೆಸ್'ಗೆ ಗುಡ್ ಬೈ ಹೇಳಿದ ಕೃಷ್ಣ ಈಗ ಬಿಜೆಪಿ ಕಡೆ ಮುಖ ಮಾಡುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಷ್ಟಕ್ಕೂ ಇಂತಹ ಅನುಮಾನ ಮೂಡಲು ಕಾರಣವಾದ ಅಂಶ ಹೀಗಿದೆ.

 ಬಿಜೆಪಿಯಲ್ಲಿ ಉಂಟಾಗಿರುವ ರಾಜಕೀಯ ಬೇಳವಣಿಗೆಯೇ ಇಂತಹ ಅನುಮಾನ ಮೂಡಿಸಿದೆ. ಎಸ್. ಎಂ ಕೃಷ್ಣ ನಿವಾಸಕ್ಕೆ ಯಡಿಯೂರಪ್ಪ ಭೇಟಿ ನೀಡಲಿದ್ದು, ಬಿಜೆಪಿಗೆ ಸೇರ್ಪಡೆಗೊಳ್ಳುವಂತೆ ಆಹ್ವಾನವನ್ನೂ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಮೂಲಕ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತ ಸೆಳೆಯಲು ಬಿಜೆಪಿ ಕಸರತ್ತು ಶುರು ಮಾಡಿಕೊಂಡಿದೆ.