ಟೆಕ್ಸಾಸ್[ಜೂ.12]: ಅಮೆರಿಕಾದ ಟೆಕ್ಸಾಸ್ ನಲ್ಲಿ ವ್ಯಕ್ತಿಯೊಬ್ಬ ಆಕಾಶದಲ್ಲಿ ಮೂಡಿದ ಮಿಂಚಿನ ಮನಮೋಹಕ ದೃಶ್ಯವನ್ನು ಸ್ಲೋ ಮೋಷನ್ ನಲ್ಲಿ ಸೆರೆ ಹಿಡಿದಿದ್ದಾನೆ. ಸದ್ಯ ಅಂಬರದಲ್ಲಿ ಮೂಡಿದ ಮಿಂಚಿನ ನರ್ತನ ಭಾರೀ ವೈರಲ್ ಆಗುತ್ತಿದೆ. 

ರಿಯಾನ್ ಬಿಲ್ವಿಸ್ಕೀ ಎಂಬಾತ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾನೆ. ಸ್ಪೈಸ್ ವುಡ್ ನಲ್ಲಿ ಚಂಡಮಾರುತದಿಂದಾಗಿ ಮೂಡಿದ್ದ ಕರಿಮೋಡ ಆಸ್ಟಿನ್ ನೆಡೆ ತೇಲಿ ಹೋಗುತ್ತಿತ್ತು. ಈ ವೇಳೆ ಬಿಲ್ವಿಸ್ಕೀ ಮಿಂಚಿನ ಆಟವನ್ನು ತಮ್ಮ ಐಫೋನ್ ನಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ.

ವೃತ್ತಿಪರ ಛಾಯಾಗ್ರಾಹಕ ಬಿಲ್ವಿಸ್ಕೀ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಭಾರೀ ಬಿರುಗಾಳಿಯಿಂದಾಗಿ ಅಪಾಯವುಂಟಾಗಬಹುದೆಂಬ ೆಚ್ಚರಿಕೆ ನಮಗೆ ನೀಡಲಾಗಿತ್ತು. ಮಿಂಚು, ಗುಡುಗು ಸಿಡಿಲು ಕೂಡಾ ಇತ್ತು. ಹೀಗಾಗಿ ನಾವಿದ್ಧ ಸ್ಥಳದಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಲು ನಿರ್ಧರಿಸಿದೆವು,. ಈ ಮಧ್ಯೆ ಮಿಂಚಿನ ದೃಶ್ಯ ಸೆರೆ ಹಿಡಯುವ ಯೋಚನೆ ಹೊಳೆಯಿತು. ಕೂಡಲೇ ನನ್ನ ಐಫೋನ್ ನಲ್ಲಿ ಇದನ್ನು ಸೆರೆ ಹಿಡಿದೆ' ಎಂದಿದ್ದಾರೆ.

ಇದೊಂದು ಸ್ಲೋ ಮೋಷನ್ ವಿಡಿಯೋ ಆಗಿರುವುದರಿಂದ ಅತ್ಯಂತ ಸುಂದರವಾಗಿ ಮುಡಿ ಬಂದಿದೆ ಹಾಗೂ ಸೋಶಿಯಲ್ ಮೀಡಿಯಾದಲ್ಲೂ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.