ಬ್ರಿಟನ್[ಆ.22]: ಕೆಲವರಿಗೆ ನಿದ್ದೆಯಲ್ಲೂ ಓಡಾಡುವ ಅಭ್ಯಾಸ ಇರುತ್ತದೆ. ಬ್ರಿಟನ್‌ನಲ್ಲಿ ನಿದ್ರೆಯಲ್ಲಿ ನಡೆದಾಡುವ ಕಾಯಿಲೆ ಇರುವ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪ್ರೇಯಸಿಗೆ ಲೈಂಗಿಕ ಕಿರುಕುಳ ನೀಡಿದ್ದ. ಆದರೂ, ಆತ ಈ ಕೇಸಿನಿಂದ ಬಚಾವಾಗಿದ್ದಾನೆ.

ಡೇಲ್‌ ಕೆಲ್ಲಿ ಎಂಬಾತ 2017ರಲ್ಲಿ ತನ್ನ ಸ್ನೇಹಿತ ಹಾಗೂ ಆತನ ಪ್ರೇಯಸಿಯ ಜೊತೆ ನೈಟ್‌ಕ್ಲಬ್‌ವೊಂದಕ್ಕೆ ತೆರಳಿದ್ದ. ಪಾರ್ಟಿ ಮುಗಿಸಿ ಮನೆಗೆ ಮರಳುವಾಗ ಕೆಲ್ಲಿ ನಿದ್ದೆಗೆ ಜಾರಿದ್ದ. ಹೀಗಾಗಿ ಅವರಿಬ್ಬರೂ ಕೆಲ್ಲಿಯನ್ನು ತಮ್ಮ ಮನೆಯಲ್ಲಿಯೇ ಮಲಗಿಸಿಕೊಂಡಿದ್ದರು. ಆದರೆ, ಕೆಲ್ಲಿ ನಿದ್ದೆ ಗಣ್ಣಿನಲ್ಲಿ ತನ್ನ ಸ್ನೇಹಿತನ ಕೋಣೆಗೆ ಬಂದು ಆತನ ಪ್ರೇಯಸಿಯ ಜೊತೆ ಮಲಗಿಕೊಂಡಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಆತ ಅರಿವಿಲ್ಲದೇ ಈ ಕೃತ್ಯ ಎಸಗಿದ್ದಾನೆ ಎಂದು ತೀರ್ಪು ನೀಡಿದೆ.