ರೊಚ್ಚಿಗೆದ್ದ ಜನ 300 ಮೊಸಳೆಗಳನ್ನು ಕೊಚ್ಚಿದರು!

Slaughter of the crocodiles: 300 captive reptiles are slaughtered as REVENGE by angry mob
Highlights

ಅಲ್ಲಿ ಮಾನವರ ಸಿಟ್ಟು ನೆತ್ತಿಗೇರಿತ್ತು. 300ಕ್ಕೂ ಅಧಿಕ ಮೊಸಳೆಗಳನ್ನು ಸಾಯಿಸಿದ್ದರು. ಸಾಯಿಸಿದ್ದು ಮಾತ್ರವಲ್ಲದೇ ಸತ್ತರ ಮೇಲೆಯೂ ಅವುಗಳ ಮೇಲೆ ದಾಳಿ ಮಾಡುತ್ತಿದ್ದರು. ಇಷ್ಟಾದರೂ ಅವರ ಕೋಪ ತಣ್ಣಗಾಗಿರಲಿಲ್ಲ.ಹಾಗಾದರೆ ಏನಿದು ಘಟನೆ?

ಅಲ್ಲಿ ಮಾನವರ ಸಿಟ್ಟು ನೆತ್ತಿಗೇರಿತ್ತು. 300ಕ್ಕೂ ಅಧಿಕ ಮೊಸಳೆಗಳನ್ನು ಸಾಯಿಸಿದ್ದರು. ಸಾಯಿಸಿದ್ದು ಮಾತ್ರವಲ್ಲದೇ ಸತ್ತರ ಮೇಲೆಯೂ ಅವುಗಳ ಮೇಲೆ ದಾಳಿ ಮಾಡುತ್ತಿದ್ದರು. ಇಷ್ಟಾದರೂ ಅವರ ಕೋಪ ತಣ್ಣಗಾಗಿರಲಿಲ್ಲ.ಹಾಗಾದರೆ ಏನಿದು ಘಟನೆ?

ಇಂಡೋನೇಷಿಯಾದ ಹಳ್ಳಿಯೊಂದರ ಜನ ಕೈಗೆ ಸಿಕ್ಕ ಆಯುಧಗಳನ್ನೆಲ್ಲ ಬಳಕೆ ಮಾಡಿಕೊಂಡಿದ್ದರು. ಅವರ ಊರಿನ ಮನುಷ್ಯನೊಬ್ಬನ ಸಾವಿಗೆ ಯಾವುದೋ ಒಂದು ಮೊಸಳೆ ಕಾರಣವಾಗಿತ್ತು. ಇದಕ್ಕೆ ಪ್ರತಿಕಾರ ತೀರಿಸಲು ಇಡೀ ಹಳ್ಳಿಗರೆ ಯುದ್ಧಕ್ಕೆ ಇಳಿದಿದ್ದರು.

ಕೃಷಿ ಕೆಲಸ ಮಾಡಲು ಹೊಲಕ್ಕೆ ತೆರಳಿದ್ದ ವ್ಯಕ್ತಿಯೊಬ್ಬನನ್ನು ಮೊಸಳೆ ತಿಂದು ಹಾಕಿತ್ತು.  ಚಿತ್ರಗಳನ್ನು ನೋಡಿದರೆ ಇವರು ಎಂಥಾ ಮನುಷ್ಯರಪ್ಪಾ? ಎಂದು ಒಂದು ಕ್ಷಣ ನಿಮಗೆ ಅನ್ನಿಸದೆ ಇರದು.ಇಂಡೋನೇಷಿಯಾದ ಪಶ್ಚಿಮ ಪಪುವಾದಲ್ಲಿ ಈ ಮೊಸಳೆಗಳ ಸಾಮೂಹಿಕ ಹತ್ಯೆ ನಡೆದಿದೆ. ಮೊಸಳೆ ದಾಳಿಗೆ ವ್ಯಕ್ತಿ ಬಲಿಯಾದ ನಂತರ ಆತನ ಅಂತ್ಯ ಕ್ರಿಯೆ ನೆರವೇರಿಸಲಾಗಿದೆ. ಅಂತ್ಯಕ್ರಿಯೆ ನಂತರ ರೊಚ್ಚಿಗೆದ್ದ ಜನ ಮೊಸಳೆಗಳ ಮಾರಣಹೋಮ ಮಾಡಿದ್ದಾರೆ. ಪೊಲೀಸರು ಈ ಘಟನೆ ನೋಡುತ್ತಿದ್ದರೂ ರೊಚ್ಚಿಗೆದ್ದ ಜನರ  ಎದುರು ನಿಲ್ಲಲು ಸಾಧ್ಯವಾಗಿಲ್ಲ.

loader