ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಇಲ್ಲಿನ ಮಂಗಲಪೇಟ್‌ನಲ್ಲಿರುವ ಮೇಥೋಡಿಸ್ಟ್ ಚರ್ಚ್‌ನ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು

ಬೀದರ್(ಮಾ.04): ಛತ್ತೀಸ್‌ಗಢದಲ್ಲಿ ನಕ್ಸಲಿಯರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ವಿಶೇಷ ಕಮಾಂಡೋ ಪಡೆಯ ಯೋಧ ಬೀದರ್‌ನ ಬಿ.ಸುಶೀಲ್ ಕುಮಾರ್ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಇಲ್ಲಿನ ಮಂಗಲಪೇಟ್‌ನಲ್ಲಿರುವ ಮೇಥೋಡಿಸ್ಟ್ ಚರ್ಚ್‌ನ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ವೀರಮರಣ ಹೊಂದಿದ್ದ ಪೇದೆಯ ಕುಟುಂಬಕ್ಕೆ ತೆಲಂಗಾಣ ಸರ್ಕಾರದಿಂದ 60 ಲಕ್ಷ ರು.ಪರಿಹಾರ ಘೋಷಿಸಲಾಗಿದ್ದು, ಇಡೀ ಸೇವಾವಧಿಯ ಸಂಬಳ ಹಾಗೂ ಪತ್ನಿಗೆ ಸರ್ಕಾರಿ ನೌಕರಿ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ತಿಳಿಸಿದ್ದಾರೆ.