ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ಖಚಿತವಾದರೂ, ಸಾವು ಯಾವ ರೂಪದಲ್ಲಿ ಬರಬಹುದೆಂಬುದನ್ನು ಯಾರೊಬ್ಬರೂ ಊಹಿಸಲಾರರು. ಆದರೆ ಕೆಲವರು ತಮ್ಮ ಸಾವಿನ ಬಗ್ಗೆ ತಾವೇ ಆಡಿಕೊಂಡ ಮಾತುಗಳು ಕೆಲವೊಮ್ಮೆ ಅವರ ಸಾವಿನ ಸಂದರ್ಭ ಆಪ್ತರಲ್ಲಿ ಸಾಕಷ್ಟುನೋವನ್ನು ತರುವುದಿದೆ. ಅಂತಹುದೇ ಒಂದು ಸನ್ನಿವೇಶ ಶುಕ್ರವಾರ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 32ರ ಹರೆಯದ ಪೊಲೀಸ್‌ ಅಧಿಕಾರಿ ಫಿರೋಜ್‌ ಅಹ್ಮದ್‌ ದಾರ್‌ ಅವರ ವಿಷಯದಲ್ಲಿ ಸೃಷ್ಟಿಯಾಗಿದೆ.

ನವದೆಹಲಿ(ಜೂ.18): ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ಖಚಿತವಾದರೂ, ಸಾವು ಯಾವ ರೂಪದಲ್ಲಿ ಬರಬಹುದೆಂಬುದನ್ನು ಯಾರೊಬ್ಬರೂ ಊಹಿಸಲಾರರು. ಆದರೆ ಕೆಲವರು ತಮ್ಮ ಸಾವಿನ ಬಗ್ಗೆ ತಾವೇ ಆಡಿಕೊಂಡ ಮಾತುಗಳು ಕೆಲವೊಮ್ಮೆ ಅವರ ಸಾವಿನ ಸಂದರ್ಭ ಆಪ್ತರಲ್ಲಿ ಸಾಕಷ್ಟುನೋವನ್ನು ತರುವುದಿದೆ. ಅಂತಹುದೇ ಒಂದು ಸನ್ನಿವೇಶ ಶುಕ್ರವಾರ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 32ರ ಹರೆಯದ ಪೊಲೀಸ್‌ ಅಧಿಕಾರಿ ಫಿರೋಜ್‌ ಅಹ್ಮದ್‌ ದಾರ್‌ ಅವರ ವಿಷಯದಲ್ಲಿ ಸೃಷ್ಟಿಯಾಗಿದೆ.

ಪುಲ್ವಾಮದ ಡೊಂಗ್ರಿಪೊರದಲ್ಲಿ ಭಾರೀ ಜನರ ಕಂಬನಿ ನಡುವೆ ಫಿರೋಜ್‌ ಅಂತ್ಯ ಸಂಸ್ಕಾರ ನಡೆಯಿತು. ಆದರೆ 2013ರಲ್ಲಿ ತಮ್ಮ ಫೇಸ್‌ಬುಕ್‌ ಸ್ಟೇಟಸ್‌ನಲ್ಲಿ ಫಿರೋಜ್‌ ಹಾಕಿದ್ದ ಸಂದೇಶ ‘ಸಮಾಧಿಯ ಮೊದಲ ರಾತ್ರಿ' ಇದೀಗ ಭಾರೀ ವೈರಲ್‌ ಆಗಿದ್ದು, ಲಕ್ಷಾಂತರ ಜನರ ಕಣ್ಣಲ್ಲಿ ಕಣ್ಣೀರು ಮಿಡಿಯುವಂತೆ ಮಾಡಿದೆ. ‘ನನ್ನ ಸಮಾಧಿಯ ಮೊದಲ ರಾತ್ರಿ ನನಗೆ ಏನಾಗಲಿದೆ ಎಂಬುದಾಗಿ ಎಂದಾದರೂ ಒಂದು ಬಾರಿ ನಿಮ್ಮಷ್ಟಕ್ಕೇ ನೀವು ಪ್ರಶ್ನಿಸಿಕೊಂಡಿದ್ದೀರಾ? ನಿಮ್ಮ ದೇಹವನ್ನು ಶುಚಿಗೊಳಿಸಿ ಸಮಾಧಿಗೆ ಕೊಂಡೊಯ್ಯುವ ಕ್ಷಣಗಳ ಬಗ್ಗೆ ಒಂದು ಬಾರಿ ಯೋಚಿಸಿ. ಜನರು ನಿಮ್ಮನ್ನು ಸಮಾಧಿಗೆ ಹೊತ್ತೊಯ್ಯುವ ಮತ್ತು ನಿಮ್ಮ ಕುಟುಂಬಸ್ಥರು ಅಳುವ ದಿನದ ಬಗ್ಗೆ ಯೋಚಿಸಿ. ಸಮಾಧಿಯೊಳಗೆ ನಿಮ್ಮನ್ನು ಹಾಕುವ ಕ್ಷಣಗಳ ಬಗ್ಗೆ ಯೋಚಿಸಿ' ಎಂದು ಫಿರೋಜ್‌ ತಮ್ಮ ಫೇಸ್‌ಬುಕ್‌ ಸ್ಟೇಟಸ್‌ನಲ್ಲಿ ಬರೆದಿದ್ದರು.