ಸ್ಕೈಬಾರ್ ಗಲಾಟೆ ಪ್ರಕರಣದಲ್ಲಿ ಶಾಸಕ ವಿಜಾಯಾನಂದ ಕಾಶಪ್ಪನವರ್ಗೆ ಕಂಟಕ ಶುರುವಾಗಿದೆ. 1ನೇ ಎಸಿಎಂಎಂ ಕೋರ್ಟ್ನಿಂದ ಇಂದು ಕೋರ್ಟ್ಗೆ ಹಾಜರಾಗುವಂತೆ ಕಾಶಪ್ಪನವರ್ಗೆ ವಾರಂಟ್ ಜಾರಿಗೊಳಿಸಲಾಗಿದೆ.
ಬೆಂಗಳೂರು (ಡಿ. 29): ಸ್ಕೈಬಾರ್ ಗಲಾಟೆ ಪ್ರಕರಣದಲ್ಲಿ ಶಾಸಕ ವಿಜಾಯಾನಂದ ಕಾಶಪ್ಪನವರ್ಗೆ ಕಂಟಕ ಶುರುವಾಗಿದೆ. 1ನೇ ಎಸಿಎಂಎಂ ಕೋರ್ಟ್ನಿಂದ ಇಂದು ಕೋರ್ಟ್ಗೆ ಹಾಜರಾಗುವಂತೆ ಕಾಶಪ್ಪನವರ್ಗೆ ವಾರಂಟ್ ಜಾರಿಗೊಳಿಸಲಾಗಿದೆ.
ಪ್ರಕರಣದ ಹಿನ್ನೆಲೆ
2014ರ ಜುಲೈ 1 ರ ರಾತ್ರಿ ಯುಬಿ ಸಿಟಿಯ ಸ್ಕೈಬಾರ್ನಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಿದ್ದ ಶಾಸಕ ಕಾಶಪ್ಪನವರ್ ಗಲಾಟೆ ನಡೆಸಿದ್ದರು. ರಾತ್ರಿ 1 ಗಂಟೆಯ ನಂತರವೂ ಬಾರ್ನಲ್ಲಿ ಶಾಸಕ ಮತ್ತವರ ಪಟಾಲಂ ಅವಧಿ ಮೀರಿದ ನಂತರವೂ ಕುಳಿತಿದ್ದರು. ಅವಧಿ ಮೀರಿದ ನಂತರ ಹೋಟೆಲ್ ತೆರೆದಿದ್ದನ್ನು ನೋಡಿ ಕಬ್ಬನ್ ಪಾರ್ಕ್ ಠಾಣೆ ಪೇದೆಗಳಾದ ಕಿರಣ್ ಹಾಗೂ ಪ್ರಶಾಂತ ನಾಯ್ಕ್ ಪ್ರಶ್ನಿಸಿದ್ದರು. ಇದೇ ವೇಳೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಸಿ, ಬೂಟ್ ತೋರಿಸಿ ಶಾಸಕ ಕಾಶಪ್ಪನವರ್ ಹಲ್ಲೆ ನಡೆಸಿದ್ದರು.
ಅಧಿಕಾರ ಗತ್ತು ತೋರಿಸಿ, ರೌಡಿಶೀಟರ್ನಿಂದ ಪೊಲೀಸರಿಗೆ ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಪ್ರತಿ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ.
