ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಲೆಗಳು ಹೇಗಿವೆ ಎಂದರೆ ದನದ ಕೊಟ್ಟಿಗೆಗಿಂತ ಕೆಟ್ಟದಾಗಿವೆ. ಉತ್ತಮ ಗುಣಮಟ್ಟದ ಶಾಲೆಗಳ ನಿರ್ಮಾಣದ ಅಗತ್ಯವೇ ಹೊರತು ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ದೇಗುಲಗಳ ಅಗತ್ಯವಿಲ್ಲ' ಎಂದರು.

ರಾಯಚೂರು(ಮಾ.25): ಉತ್ತಮ ಜಲಾಶಗಳ ನಿರ್ಮಾಣ, ಅತ್ಯತ್ತಮವಾದ ವಿಶ್ವವಿದ್ಯಾಲಯಗಳ ಸ್ಥಾಪನೆ, ಹಳ್ಳಿಹಳ್ಳಿಗಳಲ್ಲಿ ಒಳ್ಳೆಯ ಶಾಲೆಗಳ ನಿರ್ಮಾಣ ಮುಖ್ಯವೇ ಹೊರತು ರಾಮಮಂದಿರ, ಚರ್ಚ್ ಹಾಗೂ ಮಸೀದಿಗಳ ಅಗತ್ಯವಿಲ್ಲ ಎಂದು ಸಾಹಿತಿ ಎಸ್.ಕೆ. ಭಗವಾನ್ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಲೆಗಳು ಹೇಗಿವೆ ಎಂದರೆ ದನದ ಕೊಟ್ಟಿಗೆಗಿಂತ ಕೆಟ್ಟದಾಗಿವೆ. ಉತ್ತಮ ಗುಣಮಟ್ಟದ ಶಾಲೆಗಳ ನಿರ್ಮಾಣದ ಅಗತ್ಯವೇ ಹೊರತು ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ದೇಗುಲಗಳ ಅಗತ್ಯವಿಲ್ಲ' ಎಂದರು.

ನಮ್ಮ ದೇಶದಲ್ಲಿ ಒಟ್ಟು 26 ಬಾರಿ ದಾಳಿ ಮಾಡಿ ಲೂಟಿ ಮಾಡಿದ್ದಾರೆ. ಆಗ ನಿಮ್ಮ ರಾಮ,ಕೃಷ್ಣ,ಶಿವ,ಚಾಮುಂಡಿ ಏನು ಮಾಡುತ್ತಿದ್ದರು. ಗುಲಾಮಗಿರಿಯನ್ನು ಎತ್ತಿ ಹಿಡಿಯುವ ದೇವರುಗಳು ರಾಮ ಹಾಗೂ ಕೃಷ್ಣ. ಹಿಂದು ಧರ್ಮದ ಪ್ರಕಾರ ಶಿವ ಮೂಲ ದೇವರು. ಸನಾತನ ಸಂಸ್ಕೃತಿಯಿಂದ ನೋಡುವುದಾದರೆ ಶಿವನನ್ನು ಆರಾಧಿಸುವುದಕ್ಕೆ ಕುರುಹುಗಳಿವೆ. ಆದರೆ ಗುಲಾಮಗಿರಿಯನ್ನು ಪ್ರೋತ್ಸಾಹಿಸುವ ರಾಮನನ್ನೇ ಹೆಚ್ಚು ಆದ್ಯತೆ ನೀಡಲಾಗುತ್ತದೆ' ಎಂದು ಹಿಂದು ಧರ್ಮದ ಆಚರಣೆ ಬಗ್ಗೆ ಕಿಡಿಕಾರಿದರು.

ಕೇವಲ ರಾಮಮಂದಿರ ಮಾತ್ರವಲ್ಲ ಇಡೀ ದೇಶದಲ್ಲಿರುವ ಚರ್ಚ್,ಮಸೀದಿ ಹಾಗೂ ದೇಗುಲಗಳನ್ನು ಒಡೆದು ಹಾಕಿ. ಇವುಗಳಿಂದ ರಾಷ್ಟ್ರಕ್ಕೆ ಯಾವುದೇ ರೀತಿ ಪ್ರಯೋಜನವಾಗದು. ಇವುಗಳ ಬದಲು ದೇಶದ ಜನರ ಒಳಿತಿಗೆ ಪ್ರಗತಿಯಾಗುವಂತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ ಎಂದು ಚಿಂತಕ ಎಸ್.ಕೆ. ಭಗವಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.