ಕಾಣೆಯಾದ 6 ವರ್ಷದ ಬಳಿಕ ಬಾಲಕ ಪತ್ತೆಯಾಗಿದ್ದು ಹೇಗೆ..?

Six years later, missing boy from Delhi traced to Punjab
Highlights

3 ವರ್ಷದ ಬಾಲಕನಾಗಿದ್ದಾಗ ದಿಲ್ಲಿಯಿಂದ ಕಾಣೆಯಾಗಿದ್ದ ಬಾಲಕನೋರ್ವನನ್ನು 6 ವರ್ಷದ ಬಳಿಕ ಪತ್ತೆ ಮಾಡುವಲ್ಲಿ  ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ. 
 

ದಿಲ್ಲಿ :  3 ವರ್ಷದ ಬಾಲಕನಾಗಿದ್ದಾಗ ದಿಲ್ಲಿಯಿಂದ ಕಾಣೆಯಾಗಿದ್ದ ಬಾಲಕನೋರ್ವನನ್ನು 6 ವರ್ಷದ ಬಳಿಕ ಪತ್ತೆ ಮಾಡುವಲ್ಲಿ  ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ. 

ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳ ತಂಡವು ವಿವಿಧ ಪ್ರದೇಶಗಳಲ್ಲಿ  ಪರಿಶೀಲನೆ ನಡೆಸಿ ಬಾಲಕನನ್ನು ಪತ್ತೆ ಮಾಡಲಾಗಿದೆ ಎಂದು  ಕ್ರೈಂ ಬ್ರಾಂಚ್ ಜಂಟಿ ಆಯುಕ್ತರಾದ ಅಲೋಕ್ ಕುಮಾರ್ ಹೇಳಿದ್ದಾರೆ. 

ಮನೆಯಿಂದ ಕಾಣೆಯಾದಾಗ ಈ ಬಾಲಕ ಅನೇಕ ಪ್ರದೇಶಗಳಲ್ಲಿ ಸುತ್ತಿದ್ದ. ಸದ್ಯ ಬಾಲಕನನ್ನು ಪೊಲೀಸರು ದಂಪತಿ ಬಳಿಯಲ್ಲಿ ಪತ್ತೆ ಮಾಡಿದ್ದಾರೆ. ಸಂಜಯ್ ಹಾಗೂ  ಲಾಕಿ ಎನ್ನುವ ದಂಪತಿ ಬಳಿ ಬಿಹಾರದಲ್ಲಿ ಪತ್ತೆ ಮಾಡಲಾಗಿದೆ. ಇವರೇ ಬಾಲಕನನ್ನು ತಮ್ಮ ಜೊತೆಯಲ್ಲಿ ಕರೆದೊಯ್ದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಬಿಹಾರದಲ್ಲಿ ಈತ ಒಂದು ತಿಂಗಳು ವಾಸವಾಗಿದ್ದು, ಆತನನ್ನು ತಮ್ಮ ಜೊತೆಗೆ ಕರೆದೊಯ್ದ ದಂಪತಿ ಕೂಡ ಆತನ ಪೋಷಕರ ಪತ್ತೆಗೆ ಹಲವು ಬಾರಿ ಪ್ರಯತ್ನಿಸಿದ್ದರು.

loader