ಗಾಜಾ ಚಂಡಮಾರುತದಿಂದ ಕಡಲೂರಿನಲ್ಲಿ ಎರಡು ಹಾಗೂ ತಂಜಾವೂರಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಯಾವೆಲ್ಲ ಪ್ರದೇಶಗಳಿಗೆ ಚಂಡಮಾರುತ ಪ್ರವೇಶಿಸುವ ಅನುಮಾನ ವ್ಯಕ್ತವಾಗಿದೆಯೋ ಆ ಎಲ್ಲಾ ಭಾಗಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಈಗಾಗಲೇ 76 ಸಾವಿರ ಮಂದಿಯನ್ನು ಮನೆಯಿಂದ ದೂರ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಚೆನ್ನೈ[ನ.16]: ಶುಕ್ರವಾರ ರಾತ್ರಿ 1 ಗಂಟೆ 40 ನಿಮಿಷಕ್ಕೆ 'ಗಜ' ಚಂಡಮಾರುತವು ತಮಿಳುನಾಡಿನ ಕರಾವಳಿ ಭಾಗಕ್ಕೆ ಅಪ್ಪಳಿಸಿದೆ. ಬಿರುಗಾಳಿಯ ಹೊಡೆತಕ್ಕೆ ತಮಿಳುನಾಡಿನ ನಾಗಪಟ್ಟಣಂ ಬಳಿ ಭೂಕುಸಿತ ಸಂಭವಿಸಿದೆ. ಭೂ ಕುಸಿತದ ವೇಳೆ ಗಾಳಿಯ ವೇಗವು ಪ್ರತಿ ಗಂಟೆಗೆ 90-100 ಕಿ. ಮೀಟರ್ ನಷ್ಟು ದಾಖಲಾಗಿದೆ. ಹವಾಮಾನ ಇಲಾಖೆ ನೀಡಿದ ವರದಿಯನ್ವಯ 'ಗಜ' ಚಂಡಮಾರುತವು ನಾಗಪಟ್ಟಿಣಂ ಹಾಗೂ ವೆದಾರ್ನಿಯಂ ನಡುವಿನ ಪಶ್ಚಿಮ ಹಾಗೂ ನೈಋತ್ಯ ಭಾಗವನ್ನು ದಾಟಿ ಮುಂದೆ ಸಾಗಿದೆ. ಈ ಬಿರುಗಾಳಿಯು ಪಶ್ಚಿಮ ಭಾಗದಲ್ಲಿ ಮುಂದೆ ಸಾಗಲಿದ್ದು, ಮುಂದಿನ 6 ಗಂಟೆಗಳಲ್ಲಿ ನಿಧಾನವಾಗಿ ಗಾಳಿಯ ವೇಗ ಕಡಿಮೆಯಾಗಲಿದೆ. ಗಾಜಾ ಚಂಡಮಾರುತದಿಂದ ಕಡಲೂರಿನಲ್ಲಿ ಎರಡು ಹಾಗೂ ತಂಜಾವೂರಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
"
ಇದನ್ನೂ ಓದಿ: ತಮಿಳುನಾಡಿಗೆ ಅಪ್ಪಳಿಸಲಿದೆ 'ಗಜ’? : ಬೆಂಗಳೂರಿನಲ್ಲಿ ಮೂರು ದಿನ ಮಳೆ
ಯಾವೆಲ್ಲ ಪ್ರದೇಶಗಳಿಗೆ ಚಂಡಮಾರುತ ಪ್ರವೇಶಿಸುವ ಅನುಮಾನ ವ್ಯಕ್ತವಾಗಿದೆಯೋ ಆ ಎಲ್ಲಾ ಭಾಗಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಈಗಾಗಲೇ 76 ಸಾವಿರ ಮಂದಿಯನ್ನು ಮನೆಯಿಂದ ದೂರ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಚಂಡಮಾರುತ ಯಾವೆಲ್ಲಾ ಜಿಲ್ಲೆಗಳಿಗೆ ಪ್ರವೇಶಿಸುತ್ತದೆ ಎಂದು ಅಂದಾಜಿಸಲಾಗಿತ್ತೋ ಆ ಎಲ್ಲಾ ಪ್ರದೇಶಗಳಲ್ಲೂ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ನಾಗಪಟ್ಟಿಣಂ ಜಿಲ್ಲೆಯಿಂದ ಈವರೆಗೂ 1313 ಜನರನ್ನು ಸಂತ್ರಸ್ತ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲದೇ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ.
