ಕೆಲವು ದಿನಗಳ ಹಿಂದೆ ಭಾರತದಲ್ಲಿ 32 ಲಕ್ಷ ಎಟಿಎಂ ಕಾರ್ಡುಗಳ ಪಾಸ್'ವರ್ಡ್'ಅನ್ನು ಹ್ಯಾಕ್ ಮಾಡಲಾಗಿತ್ತು.ಎಸ್'ಬಿಐ ಸೇರಿದಂತೆ 19 ಬ್ಯಾಂಕುಗಳ ಎಟಿಎಂ ಕಾರ್ಡುಗಳು ಸೇರಿದ್ದವು.  

ಪುಣೆ(ಅ.30): ಇತ್ತೀಚಿಗಷ್ಟೆ ಎಟಿಎಂ ಕಾರ್ಡ್'ಗಳ ಪಾಸ್'ವರ್ಡ್ ಹ್ಯಾಕ್ ಆದ ಕಾರಣ ಭಾರತದ ಪ್ರತಿಷ್ಟಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 6 ಲಕ್ಷ ಗ್ರಾಹಕರಿಗೆ ನೂತನ ಎಟಿಎಂ ಕಾರ್ಡ್ ನೀಡಿದೆ. ಬ್ಯಾಂಕಿಂಗ್ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ಬದಲಿ ಕಾರ್ಡ್ ಯೋಜನೆಯಾಗಿದೆ.

ಈಗ ನೀಡಲಿರುವ ನೂತನ ಕಾರ್ಡುಗಳ ಹಳೆ ಕಾರ್ಡುಗಳನ್ನು ಅ.26 ರಂದು ಬ್ಲಾಕ್ ಮಾಡಲಾಗಿತ್ತು. ಈಗಾಗಲೇ ಶೇ.95.5 ಅಂದರೆ 6.29 ಲಕ್ಷ ಕಾರ್ಡುಗಳನ್ನು ಗ್ರಾಹಕರಿಗೆ ತಲುಪಿಸಲಾಗಿದ್ದು, ಉಳಿದ 5 ರಷ್ಟು ಕಾರ್ಡುಗಳನ್ನು ಅವರ ವಿಳಾಸ ಪತ್ತೆಹಚ್ಚಿ ತಲುಪಿಸಲಾಗಿವುದು ಎಂದು ಎಸ್'ಬಿಐ'ನ ಕಾರ್ಪೋರೇಟ್ ಕಾರ್ಯತಂತ್ರ ಹಾಗೂ ನೂತನ ವ್ಯವಹಾರಗಳ ಉಪ ವ್ಯವಸ್ಥಾಪಕ ಮಂಜು ಅಗರ್ವಾಲ್ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಭಾರತದಲ್ಲಿ 32 ಲಕ್ಷ ಎಟಿಎಂ ಕಾರ್ಡುಗಳ ಪಾಸ್'ವರ್ಡ್'ಅನ್ನು ಹ್ಯಾಕ್ ಮಾಡಲಾಗಿತ್ತು.ಎಸ್'ಬಿಐ ಸೇರಿದಂತೆ 19 ಬ್ಯಾಂಕುಗಳ ಎಟಿಎಂ ಕಾರ್ಡುಗಳು ಸೇರಿದ್ದವು.