ಆರು ಸಂಸದರು ಸದನದ ಬಾಗಿಗೆ ನುಗ್ಗಿ ಕಡತಗಳನ್ನು ಹರಿದು ಸ್ಪೀಕರ್ ಅವರತ್ತ ಎಸೆದು ದಾಂಧಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷೆ ಈ ಶಿಸ್ತುಕ್ರಮ ಜಾರಿಗೊಳಿಸಿದ್ದಾರೆ.

ನವದೆಹಲಿ(ಜುಲೈ 24): ಲೋಕಸಭೆಯ ಘನತೆಗೆ ಚ್ಯುತಿ ಬರುವಂತೆ ವರ್ತಿಸಿದ ಆರೋಪದ ಮೇಲೆ 6 ಮಂದಿ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಅಮಾನತು ಮಾಡಿದ್ದಾರೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಗೌರವ್ ಗೊಗೋಯ್, ಕೆ.ಸುರೇಶ್, ಅಧೀರ್ ರಾಜನ್ ಚೌಧುರಿ, ರಂಜೀತ್ ರಂಜನ್, ಸುಷ್ಮಿತಾ ದೇವ್ ಮತ್ತು ಎಂಕೆ ರಾಘವನ್ ಅವರನ್ನು 5 ದಿನಗಳ ಕಾಲ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಲೋಕಸಭೆಯಲ್ಲಿ ಗೋಮಾರಾಟಗಾರರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣದ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷವು ಬೋಫೋರ್ಸ್ ಹಗರಣವನ್ನು ಪ್ರತ್ಯಸ್ತ್ರವಾಗಿ ಬಳಸಿದೆ. ಇದರಿಂದ ಆಕ್ರೋಶಗೊಂಡ ಈ ಆರು ಸಂಸದರು ಸದನದ ಬಾಗಿಗೆ ನುಗ್ಗಿ ಕಡತಗಳನ್ನು ಹರಿದು ಸ್ಪೀಕರ್ ಅವರತ್ತ ಎಸೆದು ದಾಂಧಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷೆ ಈ ಶಿಸ್ತುಕ್ರಮ ಜಾರಿಗೊಳಿಸಿದ್ದಾರೆ.