Asianet Suvarna News Asianet Suvarna News

ಶ್ಯಾಮ್ ಭಟ್ ಕೊರಳಿಗೆ ಉರುಳಾಗಲಿದೆಯಾ ಸೈಟು ಹಂಚಿಕೆ ಪ್ರಕರಣಗಳು?

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ವಿವಾದಾತ್ಮಕ ಐಎಎಸ್​ ಅಧಿಕಾರಿ ಟಿ.ಶ್ಯಾಮ್​ ಭಟ್​ ಅವರಿಗೆ ಕಂಟಕ ಶುರುವಾಗಿದೆ. ಬಿಡಿಎ ಆಯುಕ್ತರಾಗಿದ್ದ ಅವಧಿಯಲ್ಲಿ ಅನಧಿಕೃತವಾಗಿ ಸಿ.ಎ.ಸೈಟ್​ಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದ ಪ್ರಕರಣಗಳು ಶ್ಯಾಮ್​​ಭಟ್​ ಕೊರಳಿಗೆ ಉರುಳಾಗುವ ಸಂಭವವಿದೆ.

Site Allocation Case make Difficult to Shyam Bhat

ಬೆಂಗಳೂರು (ಡಿ. 24): ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ವಿವಾದಾತ್ಮಕ ಐಎಎಸ್​ ಅಧಿಕಾರಿ ಟಿ.ಶ್ಯಾಮ್​ ಭಟ್​ ಅವರಿಗೆ ಕಂಟಕ ಶುರುವಾಗಿದೆ. ಬಿಡಿಎ ಆಯುಕ್ತರಾಗಿದ್ದ ಅವಧಿಯಲ್ಲಿ ಅನಧಿಕೃತವಾಗಿ ಸಿ.ಎ.ಸೈಟ್​ಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದ ಪ್ರಕರಣಗಳು ಶ್ಯಾಮ್​​ಭಟ್​ ಕೊರಳಿಗೆ ಉರುಳಾಗುವ ಸಂಭವವಿದೆ.

ಈ ಸಂಬಂಧ ಮಾಹಿತಿ ಹಕ್ಕು ಕಾರ್ಯಕರ್ತ ಅಶೋಕ್​ಕುಮಾರ್​ ಅಡಿಗ ಅನ್ನುವವರು ಸಲ್ಲಿಸಿದ್ದ ದೂರು ಅನ್ವಯ ಶ್ಯಾಮ್ ಭಟ್​ ವಿರುದ್ಧ ಎಫ್ಐಆರ್​ ದಾಖಲಿಸಿಕೊಳ್ಳಲು ಎಸಿಬಿ ಸಿದ್ಧತೆ ನಡೆಸಿದೆ. ಶ್ಯಾಮ್​ ಭಟ್​ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವುದಕ್ಕೆ ಭ್ರಷ್ಟಾಚಾರ ನಿಗ್ರಹ ದಳ ಸರ್ಕಾರದ ಪೂರ್ವಾನುಮತಿ ಕೋರಿದೆ. ಪೂರ್ವಾನುಮತಿ ಕೋರಿದ ಕಡತಕ್ಕೆ ವಿಧಾನಸೌಧದಲ್ಲಿ ಇನ್ನೂ ಮುಕ್ತಿ ಸಿಕ್ಕಿಲ್ಲ.

ಎಸಿಬಿ ಪತ್ರ ಬರೆದು ಮೂರೂವರೆ ತಿಂಗಳಾಗಿದೆ. ಆದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೂಲಗಳ ಪ್ರಕಾರ ಈ ಕಡತ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಕಚೇರಿಯಲ್ಲಿದೆ. ಶ್ಯಾಮ್​ ಭಟ್​ ವಿರುದ್ಧ ಎಫ್​ಐಆರ್​ ದಾಖಲಿಸ್ಲಿಕ್ಕೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅನುಮತಿ ಕೊಡಬೇಕು. ಮೂರೂವರೆ ತಿಂಗಳಾದರೂ ಅನುಮತಿ ಸಿಗದೇ ಇರುವುದನ್ನು ನೋಡಿದರೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳ ಕೈವಾಡ ಇದೆ ಎಂದು ದೂರುದಾರ ಅಶೋಕ್​ಕುಮಾರ್​ ಅಡಿಗ ಆರೋಪಿಸಿದ್ದಾರೆ. ಇದಲ್ಲದೆ, ಹೈಕೋರ್ಟ್ ನಲ್ಲಿ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುವ ಸೂಚನೆ ನೀಡಿದ್ದಾರೆ.

ಶ್ಯಾಮ್​ ಭಟ್​ ವಿರುದ್ಧ ದೂರಿನಲ್ಲಿರುವ ಆರೋಪಗಳೇನು?

# ಕರ್ತವ್ಯ ಲೋಪ, ಅಪರಾಧಿಕ ಒಳ ಸಂಚು, ಸರ್ಕಾರದ ಬೊಕ್ಕಸಕ್ಕೆ ಹಾನಿ

# 1,300 ಸಿ.ಎ.ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ

# ಸಿ.ಎ.ನಿವೇಶನಗಳ ಬಾಡಿಗೆ ನೀಡುವಲ್ಲಿ ಅವ್ಯವಹಾರ

# ಅವ್ಯವಹಾರಕ್ಕೆ ಶ್ಯಾಮ್​ ಭಟ್​ರಿಂದಲೇ ಕುಮ್ಮಕ್ಕು ಶ್ಯಾಂ ಭಟ್

# ಪ್ರಭಾವಿ ಶಿಕ್ಷಣ ಸಂಸ್ಥೆಗಳಿಗೆ ಅನಧಿಕೃತವಾಗಿ ಸಿ.ಎ.ನಿವೇಶನಗಳ ಹಂಚಿಕೆ

# ಹಲವು ಸಿ.ಎ.ನಿವೇಶನಗಳ ಮಾಲೀಕರಿಗೆ ಗುತ್ತಿಗೆ ಅವಧಿ ನವೀಕರಿಸಿಲ್ಲ

# ಗುತ್ತಿಗೆ ಅವಧಿ ನವೀಕರಿಸದರಿಂದ ಬಿಡಿಎಗೆ ಕೋಟ್ಯಂತರ ರೂಪಾಯಿ ನಷ್ಟ

# ಸಿ.ಎ.ನಿವೇಶನಗಳ ಹಂಚಿಕೆಯಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ

# ಸಿ.ಎ.ನಿವೇಶನಗಳ ಉಪ ಗುತ್ತಿಗೆ ನೀಡಿದ್ದರೂ ಕ್ರಮವಿಲ್ಲ

# ಹಂಚಿಕೆಯಾದ ಉದ್ದೇಶಕ್ಕೆ ವಿರುದ್ಧವಾಗಿ ಸಿ.ಎ.ನಿವೇಶನ ಬಳಕೆ ಇದ್ದರೂ ಕ್ರಮವಿಲ್ಲ

# ಶೈಕ್ಷಣಿಕ ಉದ್ದೇಶಕ್ಕೆ ಹಂಚಿಕೆಯಾದ ನಿವೇಶನಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆ

Latest Videos
Follow Us:
Download App:
  • android
  • ios