Asianet Suvarna News Asianet Suvarna News

ಸೀತೆಯನ್ನು ಅಪಹರಿಸಿದ್ದು ಮರ್ಯಾದಾ ಪುರುಷೋತ್ತಮನಂತೆ..!

ಗುಜರಾತ್‌ನ 12ನೇ ಪಠ್ಯಪುಸ್ತಕದಲ್ಲಿ ರಾಮಾಯಾಣದ ಕುರಿತಾಗಿ ಯಡವಟ್ಟು ನಡೆದಿದೆ. ಅಯೋಧ್ಯೆ ರಾಜನಾದ ರಾಮನು ಸೀತೆಯನ್ನು ಅಪಹರಿಸಿ ಕಾಡಿಗೆ ಕರೆದೊಯ್ದ ಎಂದು ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.

Sita was “abducted” by Rama, says Gujarat board textbook

ಅಹಮದಾಬಾದ್(ಜೂನ್.1): ಗುಜರಾತ್‌ನ ೧೨ನೇ ಪಠ್ಯಪುಸ್ತಕದಲ್ಲಿ ರಾಮಾಯಾಣದ ಕುರಿತಾಗಿ ಯಡವಟ್ಟು ನಡೆದಿದೆ. ಅಯೋಧ್ಯೆ ರಾಜನಾದ ರಾಮನು ಸೀತೆಯನ್ನು ಅಪಹರಿಸಿ ಕಾಡಿಗೆ ಕರೆದೊಯ್ದ ಎಂದು ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ. 

ಗುಜರಾತಿನ 12ನೇ ತರಗತಿ ಪಠ್ಯಪುಸ್ತಕದಲ್ಲಿ ರಾಮನೇ ಸೀತೆಯನ್ನು ಅಪಹರಣ ಮಾಡಿದ ಎಂದು ತಪ್ಪಾಗಿ ಮುದ್ರಿತವಾಗಿದೆ. ಸಂಸ್ಕೃತ ಭಾಷಾ ಪಠ್ಯಕ್ರಮದ ಇಂಗ್ಲಿಷ್ ಅನುವಾದದಲ್ಲಿ ಈ ಪ್ರಮಾದ ಪತ್ತೆಯಾಗಿದ್ದು, ಇದೊಂದು ಭಾಷಾಂತರ ದೋಷ ಎಂದು  ಗುಜರಾತ್ ರಾಜ್ಯ ಶಾಲ್ಲಾ ಪಠ್ಯಪುಸ್ತಕ ರಚನಾ ಮಂಡಳಿ ಹೇಳಿದೆ.

ಕಾಳಿದಾಸನ  ಮಹಾಕಾವ್ಯ 'ರಘುವಂಶಂ' ಬಗ್ಗೆ ಮೂಲಭೂತ ತಿಳುವಳಿಕೆಯನ್ನು ನೀಡುವ ಪಾಠದಲ್ಲಿ "ಸೀತೆಯನ್ನು ರಾಮ ಅಪಹರಿಸಿದಾಗ ಲಕ್ಷ್ಮಣ ರಾಮನಿಗೆ ತಿಳಿಸಿದ ಸಂದೇಶದ ವಿವರಣೆ ಹೃದಯಸ್ಪರ್ಶಿಯಾಗಿದೆ" ಎಂದು ಪಠ್ಯದಲ್ಲಿ ಬರೆಯಲಾಗಿದೆ. ಈ ದೋಷಪೂರಿತ ಪಠ್ಯವು 12ನೇ ತರಗತಿ ಆಂಗ್ಲ ಮಾದ್ಯಮ ವಿದ್ಯಾರ್ಥಿಗಳ ಅಭ್ಯಾಸಕ್ಕೆ ನೀಡಿದ ಪಠ್ಯಪುಸ್ತಕದಲ್ಲಿದೆ.

ಈ ಕುರಿತಂತೆ ವಿವರವಾದ ತನಿಖೆಗೆ ಆದೇಶ ನೀಡಲಾಗಿದ್ದು, ತಪ್ಪಿತಸ್ಥರೆಂದು ಕಂಡುಬಂದರೆ ಭಾಷಾಂತರ ಕಾರ್ಯ ಮಾಡಿದ್ದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್ಯಕಾರಿ ಅಧ್ಯಕ್ಷ ನಿತಿನ್ ಪಠಾನಿ ಹೇಳಿದ್ದಾರೆ.

Follow Us:
Download App:
  • android
  • ios