ಉತ್ತರಪ್ರದೇಶ ಡಿಸಿಎಂ ದಿನೇಶ್ ಶರ್ಮ ಅವರ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ. ಸೀತಾಮಾತೆ ಪ್ರಣಾಳ ಶಿಶುವಾಗಿದ್ದಳು ಎಂದು ಶರ್ಮ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಲಕ್ನೋ(ಜೂ.1): ಉತ್ತರಪ್ರದೇಶ ಡಿಸಿಎಂ ದಿನೇಶ್ ಶರ್ಮ ಅವರ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ. ಸೀತಾಮಾತೆ ಪ್ರಣಾಳ ಶಿಶುವಾಗಿದ್ದಳು ಎಂದು ಶರ್ಮ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಸೀತಾಮಾತೆ ಟೆಸ್ಟ್‌ಟ್ಯೂಬ್ ಬೇಬಿಯಾಗಿದ್ದಳು ಎಂದು ಶರ್ಮ ಹೇಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಸೀತೆ ಎಂದಾಕ್ಷಣ ಆಕೆ ಜನಕ ರಾಜ ಭೂಮಿ ಉಳುತ್ತಿದ್ದಾಗ ನೇಗಿಲಿಗೆ ಪೆಟ್ಟಿಗೆಯಲ್ಲಿ ಸಿಕ್ಕಿದ ಮಗು ಎಂಬುದು ಸಾಮಾನ್ಯವಾಗಿ ಕೇಳಿಬರುವ ವಿವರಣೆ. ಆದರೆ ದಿನೇಶ್ ಶರ್ಮ ರಾಮಾಯಣ ಕಾಲದಲ್ಲೇ ಪ್ರಣಾಳ ಶಿಶು ಪರಿಕಲ್ಪನೆ ಇತ್ತು ಎಂದು ಹೇಳುವ ಮೂಲಕ ಕಿಡಿ ಹೊತ್ತಿಸಿದ್ದಾರೆ.
ಇನ್ನು ದಿನೇಶ್ ಶರ್ಮ ಅವರ ಹೇಳಿಕೆಗೆ ಬಿಜೆಪಿಯಲ್ಲೇ ಭಾರೀ ವಿರೋಧ ವ್ಯಕ್ತವಾಗಿದ್ದು, ಇದು ಅವರ ವ್ಯಯಕ್ತಿಕ ಅಭಿಪ್ರಾಯ ಎಂದು ಉತ್ತರಪ್ರದೇಶ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಹೇಳಿದ್ದಾರೆ. ದಿನೇಶ್ ಅವರ ಹೇಳಿಕೆಯಿಂದ ಪಕ್ಷ ಅಂತರ ಕಾಯ್ದುಕೊಂಡಿದ್ದು, ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
